ಟಿವಿಯಲ್ಲಿ ಕ್ರಿಕೆಟ್ ವೀಕ್ಷಿಸುತ್ತಿದ್ದ ಯುವಕ ಕುಸಿದು ಬಿದ್ದು ಮೃತ್ಯು

ಕಾಸರಗೋಡು: ಟಿವಿಯಲ್ಲಿ ಕ್ರಿಕೆಟ್ ಆಟ ವೀಕ್ಷಿಸುತ್ತಿದ್ದಂತೆ ಹಡಗು ಕಾರ್ಮಿಕನಾದ ಯುವಕ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಪಾಲಕುನ್ನು ಬಳಿಯ ಏರೋಲ್ ಕಲ್ಲಡ ನಿವಾಸಿ ಗಂಗಾಧರನ್- ನಾರಾಯಣಿ ದಂಪತಿಯ ಪುತ್ರ ನಿತೀಶ್ (೩೧) ಮೃತಪಟ್ಟ ವ್ಯಕ್ತಿ. ನಿನ್ನೆ ರಾತ್ರಿ ಟಿವಿಯಲ್ಲಿ ಭಾರತ ಹಾಗೂ ನ್ಯೂಜಿಲ್ಯಾಂಡ್ ಮಧ್ಯೆಗಿನ ಕ್ರಿಕೆಟ್ ಪಂದ್ಯ ವೀಕ್ಷಿಸುತ್ತಿದ್ದಂತೆ ನಿತೀಶ್ ಕುಸಿದು ಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ನಿತೀಶ್‌ರ ಆಕಸ್ಮಿಕ ಸಾವು ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ಮೃತರು ಪತ್ನಿ ಶಿಜಿನ, ಪುತ್ರ ಋತ್ವಿಕ್, ಸಹೋದರ ನವೀನ್ ಕುಮಾರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page