ಆಸ್ಪತ್ರೆ ಲಿಫ್ಟ್‌ನಲ್ಲಿ  ಹತ್ತರ ಹರೆಯದ  ಬಾಲಕಿಗೆ ಕಿರುಕುಳ ನೀಡಲೆತ್ನ

ಕುಂಬಳೆ:  ತಾಯಿಯೊಂ ದಿಗೆ  ವೈದ್ಯರನ್ನು ಕಾಣಲು ಹೋದ ೧೦ರ ಹರೆಯದ ಬಾಲಕಿಗೆ ಆಸ್ಪತ್ರೆಯ ಲಿಫ್ಟ್ ನೊಳಗೆ ಕಿರುಕುಳ ನೀಡಲು ಯತ್ನಿಸಿದ ಘಟನೆ ನಡೆದಿದೆ.  ಘಟನೆಗೆ ಸಂಬಂಧಿಸಿ ಕುಂಬಳೆ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ನಿನ್ನೆ ಈ ಘಟನೆ ನಡೆದಿರುವುದಾಗಿ ತಿಳಿಸಲಾಗಿದೆ.

ತಾಯಿ ಔಷಧಿ ಖರೀದಿಸಲೆಂದು ಹೋದ ಸಂದರ್ಭದಲ್ಲಿ  ಬಾಲಕಿಯ ಸಮೀಪಕ್ಕೆ ತಲುಪಿದ ಯುವಕ   ಲಿಫ್ಟ್ ತೋರಿಸಿಕೊಡು ವುದಾಗಿ ತಿಳಿಸಿ ಆಕೆಯನ್ನು ಕರೆದೊಯ್ದು ಕಿರುಕುಳ ನೀಡಲೆತ್ನಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ತಾಯಿ ಔಷಧಿ ಖರೀದಿಸಿ ಮರಳಿ ಬಂದಾಗ ಮಗಳನ್ನು ಅಲ್ಲಿ ಕಾಣಲಿಲ್ಲ. ಆಕೆಗಾಗಿ ಹುಡುಕಾಡುತ್ತಿರುವ ಮಧ್ಯೆ ಲಿಫ್ಟ್‌ನ ಸಮೀಪದಲ್ಲಿ ಕಂಡುಬಂದಿದ್ದಾಳೆ.  ಅನಂತರ ಆಕೆಯನ್ನು ವಿಚಾರಿಸಿ ದಾಗ ಬಾಲಕಿ ನಡೆದ ಘಟನೆಯ ಕುರಿತು ತಿಳಿಸಿದ್ದಾಳೆ.  ಈಬಗ್ಗೆ ಕೂಡಲೇ ಪೊಲೀಸರಿಗೆ ದೂರು ನೀಡಲಾ ಯಿತು. ಆರೋಪಿ ಯನ್ನು ಪತ್ತೆಹಚ್ಚಲು ಪೊಲೀಸರು ಪ್ರಯತ್ನ ಆರಂಭಿಸಿದ್ದಾರೆ. ಇದರ ಅಂಗವಾಗಿ ಆಸ್ಪತ್ರೆಯ ಸಿಸಿ ಟಿವಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಲಾಗಿದೆ.

You cannot copy contents of this page