ರಾಜ್ಯದಲ್ಲಿ ಕೊನೆಯ ಕಮ್ಯುನಿಸ್ಟ್ ಮುಖ್ಯಮಂತ್ರಿ ಪಿಣರಾಯಿ ವಿಜಯನ್- ಯುವಮೋರ್ಚಾ
ಮಂಜೇಶ್ವರ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಡೆಸುವ ನವಕೇರಳ ಸಭೆಯಂಗವಾಗಿರುವ ಯಾತ್ರೆ ಅವರ ಕೊನೆಯ ಯಾತ್ರೆಯಾಗಿರಲಿದೆ ಎಂದು ಯುವಮೋರ್ಚಾ ರಾಜ್ಯ ಅಧ್ಯಕ್ಷ ಪ್ರಪುಲ್ ಕೃಷ್ಣ ಅಭಿಪ್ರಾಯ ಪಟ್ಟರು. ಅಲ್ಪತನ, ಜಂಬದಿಂದ ರಾಜ್ಯದ ಕೊನೆಯ ಕಮ್ಯುನಿಸ್ಟ್ ಆಡಳಿತ ಇವರದ್ದಾಗಿರುತ್ತದೆ ಎಂದು ಅವರು ನುಡಿದರು. ಮಜೀರ್ಪಳ್ಳದಲ್ಲಿ ಬಿಜೆಪಿ ವರ್ಕಾಡಿ ಪಂ. ಸಮಿತಿ ಆಯೋಜಿಸಿದ್ದ ಜನಪಂಚಾಯತ್ ಸಾರ್ವಜನಿಕ ಸಭೆಯನ್ನು ಸೋಮವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು. ಮಂಜೇಶ್ವರದ ಶಾಸಕ ದುಬಾಯಿಯ ಶಾಸಕರಾಗಿ ಬದಲಾಗಿದ್ದಾರೆ ಎಂದವರು ತಿಂಗಳಲ್ಲಿ ೧೫ ದಿನ ವಿದೇಶದಲ್ಲಿರುವ ಶಾಸಕರಾಗಿದ್ದಾರೆ ಎಂದು ದೂರಿದರು. ದೂಮಪ್ಪ ಶೆಟ್ಟಿ ತಮಾರ್ ಅಧ್ಯಕ್ಷತೆ ವಹಿಸಿದ್ದರು. ಮಡಲ ಅಧ್ಯಕ್ಷ ಆದರ್ಶ್ ಬಿ.ಎಂ. ಕೇಂದ್ರ ಸರಕಾರದ ಯೋಜನೆಗಳ ಮಾಹಿತಿ ನೀಡಿದರು. ಅಶ್ವಿನಿ ಎಂ.ಎಲ್, ಹರಿಶ್ಚಂದ್ರ ಎಂ. ಮಣಿಕಂಠ ರೈ, ಪ್ರಾಸ್ತಾವಿಕ ಮಾತನಾಡಿದರು. ಮುಖಂಡರಾದ ವಿಜಯ್ ರೈ ತುಳಸಿ ಕುಮಾರಿ, ರವಿ ಮುಡಿಮಾರ್, ಕೃಷ್ಣ, ಯತಿರಾಜ್ ಶೆಟ್ಟಿ, ಎ.ಕೆ. ಕಯ್ಯಾರ್, ಸಂಪತ್, ಸುಬ್ರಹ್ಮಣ್ಯ ಭಟ್, ಸಂತೋಷ್ ದೈಗೋಳಿ, ಕೆ.ವಿ. ಭಟ್, ಚಂದ್ರಹಾಸ ಕಾದಂಬರ್, ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಭಾಸ್ಕರ ಪೊಯ್ಯೆ ಸ್ವಾಗತಿಸಿ, ರಕ್ಷನ್ ಅಡೆಕ್ಕಳ ವಂದಿಸಿದರು.