ಆಸ್ಪತ್ರೆ ಲಿಫ್ಟ್‌ನಲ್ಲಿ ಬಾಲಕಿಗೆ ಕಿರುಕುಳಕ್ಕೆತ್ನ ಆರೋಪಿಗಾಗಿ ಶೋಧ

ಕುಂಬಳೆ: ಆಸ್ಪತ್ರೆಯ ಲಿಫ್ಟ್‌ನೊಳಗೆ ಹತ್ತರ ಹರೆಯದ ಬಾಲಕಿಗೆ ಕಿರುಕುಳ ನೀಡಲೆತ್ನಿಸಿದ ಪ್ರಕರಣದ ಆರೋಪಿಗಾಗಿ ಪೊಲೀ ಸರು ಶೋಧ ತೀವ್ರಗೊಳಿ ಸಿದ್ದಾರೆ. ತನಿಖೆಯಂಗವಾಗಿ ಆಸ್ಪತ್ರೆಯ ಸಿಸಿ ಕ್ಯಾಮರಾದ ಹಾರ್ಡ್ ಡಿಸ್ಕ್‌ನ್ನು ಕುಂಬಳೆ ಠಾಣೆ ಇನ್‌ಸ್ಪೆಕ್ಟರ್ ಇ. ಅನೂಪ್ ತಮ್ಮ ಕಸ್ಟಡಿಗೆ ತೆಗೆದುಕೊಂ ಡಿದ್ದಾರೆ. ಅದನ್ನು ಪರಿಶೀಲಿಸಿದರೆ  ಆರೋಪಿಯ ಚಿತ್ರಗಳು  ಲಭಿಸಬಹು ದೆಂದು ನಿರೀಕ್ಷಿಸಲಾಗಿದೆ. ಮೊನ್ನೆ ತಾಯಿಯೊಂದಿಗೆ ವೈದ್ಯರನ್ನು ಕಾಣಲು ಆಸ್ಪತ್ರೆಗೆ ಬಂದ  ಬಾಲಕಿಗೆ ವ್ಯಕ್ತಿಯೋರ್ವ ಕಿರುಕುಳ ನೀಡಲು ಯತ್ನಿಸಿದ ಘಟನೆ ನಡೆದಿದೆ. ತಾಯಿ ಔಷಧಿ ಖರೀದಿಸಲೆಂದು ಹೋದ ಸಂದರ್ಭದಲ್ಲಿ ಬಾಲಕಿಯನ್ನು  ಲಿಫ್ಟ್ ತೋರಿಸಲೆಂದು ಕರೆದೊಯ್ದ ವ್ಯಕ್ತಿ ಕಿರುಕುಳ ನೀಡಲು ಯತ್ನಿಸಿರುವುದಾಗಿ ದೂರಲಾಗಿದೆ.

You cannot copy contents of this page