ಕಾಸರಗೋಡು: ಇಲಿ ವಿಷ ಸೇವಿಸಿ ಬೆಸ್ತ ಸಾವನ್ನಪ್ಪಿದ ಘಟನೆ ನಡೆದಿದೆ. ಕಿಯೂರು ಕಿಳಕ್ಕೇವ ಪ್ಪಿನ ಬಾಲನ್- ಕಾಳಿ ದಂಪತಿ ಪುತ್ರ ರಾಜೇಶ್ (೩೯) ಸಾವನ್ನಪ್ಪಿದ ಯುವಕ. ಬೇಕಲ ಪೊಲೀಸರು ಈ ಬಗ್ಗೆ ತನಿಖೆ ನಡೆಸಿದರು. ಮೃತರ ಪತ್ನಿ ಸೈನ, ಮಕ್ಕಳಾದ ಶ್ರೀಬಾಲ, ಶ್ರೀವೇದ್, ಸಹೋದರಿಯರಾದ ರಮಿಷ, ಚಿಪ್ಪಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.