ಬಿ.ಎಂ.ಎಸ್ ಕೃಷಿ ಕಾರ್ಮಿಕರ ಸಂಘಟನೆಯಿಂದ ಧರಣಿ
ಕಾಸರಗೋಡು: ಕೃಷಿ ಕಾರ್ಮಿಕರ ಪಿಂಚಣಿ ಸೌಲಭ್ಯಗಳನ್ನು ಕಸಿದು ತೆಗೆಯುವ ಪಿಣರಾಯಿ ವಿಜಯನ್ ಸರಕಾರದ ಕ್ರಮದ ವಿರುದ್ಧ ಕರ್ಷಕ ತೊಯಿಲಾಳಿ ಫೆಡರೇಶನ್ ಬಿಎಂಎಸ್‌ನ ಆಶ್ರಯದಲ್ಲಿ ಕಾಸರಗೋಡು ನಗರಸಭಾ ಕಚೇರಿ ಮುಂಭಾಗ ಧರಣಿ ನಡೆಸಲಾಯಿತು. ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷ ಅನಿಲ್ ಬಿ ನಾಯರ್ ಉದ್ಘಾಟಿಸಿದರು. ಕರ್ಷಕ ಸಂಘಟನೆಯ ಉಪಾಧ್ಯಕ್ಷ ಪುಷ್ಪರಾಜ್ ಕೊರಕ್ಕೋಡು ಅಧ್ಯಕ್ಷತೆ ವಹಿಸಿದರು. ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷ ಗೋವಿಂದನ್ ಮಡಿಕೈ, ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ, ವಲಯ ಅಧ್ಯಕ್ಷ ಬಾಲಕೃಷ್ಣನ್ ನೆಲ್ಲಿಕುಂಜೆ, ವಲಯ ಕಾರ್ಯದರ್ಶಿ ರಿಜೇಶ್ ಜೆಪಿನಗರ್, ಶಾಂತ ಕುಮಾರಿ ಜೆಪಿ ನಗರ್, ಶಿವಪ್ರಸಾದ್ ತಾಳಿಪಡ್ಪು, ಎಸ್.ಕೆ. ಉಮೇಶ್, ರಂಜಿತ್, ವೀಣಾ ನೆಲ್ಲಿಕುಂಜೆ ಮಾತನಾಡಿದರು. ವಲಯ ಜೊತೆ ಕಾರ್ಯದರ್ಶಿ ಬಾಬುಮೋನ್ ವಂದಿಸಿದರು.