ಸಮಾಜದ ಒಳಿತಿಗಾಗಿರುವ ಕೆಲಸ  ನಿರಂತರವಾಗಿರಬೇಕು-ಎಡನೀರು ಶ್ರೀ

ದಿಯಡ್ಕ: ನಮ್ಮ ಧರ್ಮ, ಕಲೆಯಂತಹ ಸಮಾಜದ ಒಳಿತಿ ಗಾಗಿರುವ ಕೆಲಸಗಳು ನಿರಂತರವಾಗಿ ರಬೇಕು. ಆ ಮೂಲಕ ತೊಡಗಿಸಿ ಕೊಂಡರೆ ಅದÀÄ ಮುಂದಿನ ಪೀಳಿ ಗೆಯ ಉನ್ನತಿ ಸಹಾಯಕವಾಗಬಲ್ಲದು ಎಂದÀÄ ಎಡನೀರು ಮಠಾದಿsÃಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.
ಮಾವಿನಕಟ್ಟೆ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂ ದಿರದಲ್ಲಿ ನೂತನವಾಗಿ ನಿರ್ಮಿಸಿದ ತ್ರಿವೇಣಿ ಸಾಂಸ್ಕೃತಿಕ ಭವನದ ಉದ್ಘಾಟನೆ ಹಾಗೂ ೪೨ನೇ ವಾರ್ಷಿಕೋ ತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಂದೂ ಕಡೆಯು ನಮ್ಮ ಧರ್ಮದ ರಕ್ಷಣೆಗಾಗಿ ಇಂತಹ ಕೇಂದ್ರಗಳಾಗಬೇಕು, ಅಲ್ಲಿ ಎಳೆವೆಯಲ್ಲಿಯೇ ಮಕ್ಕಳಲ್ಲಿ ದೇಶಭಕ್ತಿö, ಸುಸಜ್ಜಿತ ಪ್ರಜೆಯನ್ನಾಗಿಸುವುದಕ್ಕೆ ಸಾಧ್ಯವಾಗುವುದು ಎಂದು ಶ್ರೀಗಳು ಹೇಳಿದರು.
ಶ್ರೀಮಂದಿರದ ಸೇವಾ ಸಮಿತಿ ಆಧ್ಯಕ್ಷ ಕೆ.ಗಂಗಾಧರ್ ತೆಕ್ಕೆಮೂಲೆ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಹಿರಿಯರು ಹಾಕಿಕೊಟ್ಟಂತಹ ಧರ್ಮದ ಅಡಿಪಾಯವನ್ನು ಸಂರಕ್ಷಿಸಿ ಅದನ್ನು ಉಳಿಸಿಕೊಳ್ಳುವ ಕೆಲಸ ನಮ್ಮದ್ದುö, ಇಂತಹ ಕೇಂದ್ರಗಳ ಮೂಲಕ ಸಮಾಜಮುಖೀ ಕೆಲಸಗಳಾಗಬೇಕು ಎಂದರು. ಕಿರಣ್ ಕುಮಾರ್ ಕುಣಿಕುಳ್ಳಾಯ, ತಲೇಕ ಸುಬ್ರಹ್ಮಣ್ಯ ಭಟ್, ಯೋಗೀಶ್ ಶರ್ಮಾ, ರಾಜ ನ್ ಪೆರಿಯಾ, ಶಿವಶಂಕರ ಎನ್. ನೆಕ್ರಾಜೆ, ಡಾ. ರಾಜೇಂದ್ರ ಪಿಲಾಂ ಕಟ್ಟೆö, ಹರಿನಾರಾಯಣ ಮಾಸ್ತರ್, ಮುಖೇಶ್ ಶುಭಾಶಂಸನೆಗೈದರು.

Leave a Reply

Your email address will not be published. Required fields are marked *

You cannot copy content of this page