ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ
ಕಾಸರಗೋಡು: ಕಾಸರಗೋಡು ಜಿಲ್ಲಾ ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘದ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ, ಅಭಿನಂದನಾ ಕಾರ್ಯಕ್ರಮ ಜರಗಿತು.
ಬೀರಂತಬೈಲಿನ ಸಭಾ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಕಮಲಾಕ್ಷ ಕಲ್ಲುಗದ್ದೆ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಸೀತಾರಾಮ ಕೊಪ್ಪಲು, ಬಾಲಚಂದ್ರ ಕೆ. ಕುಂಬಳೆ ಭಾಗವಹಿಸಿದರು. ಗೌರವ ಅಧ್ಯಕ್ಷ ನಿರಂಜನ ಕೊರಕೋಡು, ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್ ದೋಣಿಬಾಗಿಲು, ಕೋಶಾದಿsಕಾರಿ ಸತೀಶ್ ಮಾಸ್ಟರ್ ಕೂಡ್ಲು, ಕಾಸರಗೋಡು ನಗರಸಭಾ ಸದಸ್ಯ ವರಪ್ರಸಾದ್ ಕೋಟೆಕಣಿ, ಮಹಿಳಾ ಸಂಘದ ಅಧ್ಯಕ್ಷೆ ಉಮಾ ಕಮಲಾಕ್ಷ ಉಪಸ್ಥಿತರಿದ್ದರು.
ಇದೇ ವೇಳೆ ದೀಪಾವಳಿಯ ಅಂಗವಾಗಿ ಯುವ ಸಂಘ ಆಯೋಜಿಸಿದ ದೇಸೀ ಆಕಾಶಬುಟ್ಟಿ ಸ್ಪರ್ಧೆ, ಜಿಲ್ಲಾ ಸಂಘ ಆಯೋಜಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಚಂದ್ರಶೇಖರ್ ಚಂಚಲಾಕ್ಷಿ ಕೆ., ಪ್ರದೀಪ್ ಬೇಕಲ್ ನಿರೂಪಿಸಿದರು. ಲೋಕೇಶ್ ಅಣಂಗೂರು ಸ್ವಾಗತಿಸಿ, ತೇಜಶ್ರೀ ವಂದಿಸಿದರು.