ನವಕೇರಳ ಸಭ ಸಂಪೂರ್ಣ ಪರಾಜಯ-ರಮೇಶ್ ಚೆನ್ನಿತ್ತಲ
ಕಾಸರಗೋಡು: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ನಡೆಯುತ್ತಿರುವ ನವಕೇರಳ ಸಭೆ ಸಂಪೂರ್ಣವಾಗಿ ಪರಾಜಯಗೊಂ ಡಿದೆಯೆಂದು ಕಾಂಗ್ರೆಸ್‌ನ ಹಿರಿಯ ನೇತಾರ, ಮಾಜಿ ವಿರೋಧಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಹೇಳಿದ್ದಾರೆ.
ಕಾಸರಗೋಡು ಬ್ಲೋಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಆರಂಭಗೊಂಡ ಏಕದಿನ ಶಿಬಿರದ ಉದ್ಘಾಟನೆಯ ಮೊದಲು ಕಾಸರಗೋಡು ಪ್ರೆಸ್ ಕ್ಲಬ್‌ನಲ್ಲಿ ಇಂದು ಬೆಳಿಗ್ಗೆ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಅವರು ಮಾತನಾಡುತ್ತಿದ್ದರು.
ನವಕೇರಳ ಯಾತ್ರೆಗೆ ಕಾಸರಗೋಡಿನಿಂದಲೇ ಚಾಲನೆ ನೀಡಲಾಗಿತ್ತು. ಈ ಜಿಲ್ಲೆಯಲ್ಲಿ ಮಾತ್ರವಾಗಿ ಜನರಿಂದ ೧೪೦೦೦ಕ್ಕಿಂತಲೂ ಹೆಚ್ಚು ದೂರುಗಳು ಆವೇಳೆ ಲಭಿಸಿತ್ತು. ಆ ಪೈಕಿ ಕೇವಲ ೧೯೮ ದೂರುಗಳನ್ನು ಮಾತ್ರವೇ ಪರಿಗಣಿಸಲಾಗಿದೆ. ಆದರೆ ಅವುಗಳಿಗೆ ಇನ್ನೂ ಪರಿಹಾರ ಉಂಟಾಗಿಲ್ಲ. ಇತರ ಎಲ್ಲಾ ಜಿಲ್ಲೆಗಳಲ್ಲೂ ಇದೇ ಸ್ಥಿತಿ ಇದೆ. ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಎರಡು ವಾರ ದೊಳಗಾಗಿ ಪರಿಹಾರ ಕಂಡುಕೊಳ್ಳಲಾಗುವುದೆಂದು ಮುಖ್ಯಮಂತ್ರಿ ತಿಳಿಸಿದ್ದರು. ಅದನ್ನು ನಂಬಿದ ಜನರು ಭಾರೀ ಸಂಖ್ಯೆಯಲ್ಲಿ ನವಕೇರಳ ಸಭೆಗೆ ತಲುಪಿ ದೂರು ನೀಡಿದ್ದರು. ಆದರೆ ಅವರ ನಿರೀಕ್ಷೆಗಳೆಲ್ಲ ಹುಸಿಯಾಗಿದೆ ಎಂಬ ಸತ್ಯ ಜನರಿಗೆ ಈಗ ಮನ ದಟ್ಟಾಗತೊಡಗಿದೆ. ಲೋಕಸಭಾ ಚುನಾವಣೆಯನ್ನು ಗುರಿಯಿರಿಸಿ ಎಡರಂಗ ಸರಕಾರದ ಮುಖವನ್ನು ಮಿನುಗುವಂತೆ ಮಾಡುವ ರೀತಿಯ ಕೇವಲ ಒಂದು ರಾಜಕೀಯ ಪ್ರಚಾರವಾಗಿದೆ ನವಕೇರಳ ಸಭ ಅಂದು ರಮೇಶ್ ಚೆನ್ನಿತ್ತಲ ಹೇಳಿದರು.
ರಾಹುಲ್ ಗಾಂಧಿ ಮತ್ತೆ ಕೇರಳದಲ್ಲಿ ಸ್ಪರ್ಧಿಸುವರೇ ಎಂಬ ಪ್ರಶ್ನೆಗೆ ಆ ಬಗ್ಗೆ ತೀರ್ಮಾನ ಕೈಗೊಳ್ಳಬೇಕಾಗಿರುವುದು ಹೈಕಮಾಂಡ್ ಆಗಿದೆಯೆಂದು ಪ್ರತಿಕ್ರಿ ಯೆ ನೀಡಿ ದ್ದಾರೆ. ನವಕೇರಳ ಸಭೆಯಲ್ಲಿ ಜನರನ್ನು ನೇರವಾಗಿ ಭೇಟಿಯಾಗಿ ಅವರ ದೂರುಗಳನ್ನು ಆಲಿಸಲು ಮುಖ್ಯಮಂ ತ್ರಿಯಾಗಲೀ ಸಚಿವರುಗಳಾಗಲೀ ತಯಾರಾಗುತ್ತಿಲ್ಲವೆಂದೂ ಅವರು ಆರೋಪಿಸಿದರು.