ಪೋಕ್ಸೋ ಪ್ರಕರಣ: ಮದ್ರಸ ಅಧ್ಯಾಪಕನಿಗೆ ರಿಮಾಂಡ್
ಕುಂಬಳೆ: ಹನ್ನೆರಡರ ಹರೆಯದ ಬಾಲಕಿಗೆ ಕಿರುಕುಳ ನೀಡಲೆತ್ನಿಸಿದ ಮದ್ರಸ ಅಧ್ಯಾಪಕನನ್ನು ಪೋಕ್ಸೋ ಪ್ರಕಾರ ಬಂಧಿಸಲಾಗಿದೆ. ಕಿದೂರು ಬಜ್ಪೆಕಡವಿನ ಅಬ್ದುಲ್ ಹಮೀದ್ (೪೪)ನನ್ನು ಕುಂಬಳೆ ಪೊಲೀಸರು ಸೆರೆಹಿಡಿದಿದ್ದಾರೆ. ಈತನಿಗೆ ನ್ಯಾಯಾಲಯ ೧೪ ದಿನಗಳ ರಿಮಾಂಡ್ ವಿಧಿಸಿದೆ. ಕಿರುಕುಳ ಯತ್ನಕ್ಕೊಳಗಾದ ಬಾಲಕಿ ಮನೆಗೆ ತಲುಪಿ ವಿಷಯ ತಿಳಿಸಿದಾಗಲೇ ಘಟನೆ ಬಹಿರಂಗಗೊಂಡಿದೆ. ಬಳಿಕ ಮನೆಯವರು ಮಸೀದಿ ಕಮಿಟಿಗೆ ಹಾಗೂ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಕೇಸು ದಾಖಲಿಸಿದ ಹಿನ್ನೆಲೆಯಲ್ಲಿ ಅಬ್ದುಲ್ ಹಮೀದ್‌ನನ್ನು ಕೆಲಸ ನಿರ್ವಹಿಸುವ ಮದ್ರಸದಿಂದ ಹೊರ ಹಾಕಲಾಗಿತ್ತು.