ಬಾಕ್ರಬೈಲ್‌ನಲ್ಲಿ ಲೀಗ್-ಎಸ್.ಟಿ.ಯು ಜಂಟಿ ಕಚೇರಿ ಉದ್ಘಾಟನೆ
ಬಾಕ್ರಬೈಲ್: ಬಾಕ್ರಬೈಲ್‌ನ ಮುಸ್ಲಿಂ ಲೀಗ್- ಎಸ್‌ಟಿಯು ಜಂಟಿ ಕಚೇರಿ ಯನ್ನು ಸೊಡಂಕೂರಿನಲ್ಲಿ ಉದ್ಘಾಟಿಸ ಲಾಯಿತು. ಶಾಖಾ ಅಧ್ಯಕ್ಷ ಉಮ್ಮರ್ ಬಾಕಿಮಾರ್‌ರ ಅಧ್ಯಕ್ಷತೆ ಯಲ್ಲಿ ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಿದರು. ಪಿ.ಬಿ. ಅಬೂಬಕರ್, ಬಿ. ಅಹಮ್ಮದ್ ಕುಂಞಿ ಹಾಜಿ, ಕೆ.ಎಂ. ಮುಹಮ್ಮದ್ ಕುಂಞಿ, ಮೋನುಹಾಜಿ, ಡಿ.ಬಿ. ಅಹಮ್ಮದ್ ಕುಂಞಿ ಎಂಬಿವರನ್ನು ಗೌರವಿಸಲಾಯಿತು. ಕೆ. ಮುಹಮ್ಮದ್, ಬಾವಹಾಜಿ, ಮೂಸ, ಇಬ್ರಾಹಿಂ, ಸುಬೈರ್, ಲತೀಫ್, ಅಶ್ರಫ್, ಹಾರೀಸ್, ಬಿ.ಎ. ಅಬ್ದುಲ್ ಮಜೀದ್, ಡಿ.ಬಿ. ಅಬ್ದುಲ್ ಖಾದರ್ ಮಾತನಾಡಿದರು.