ಸಮಸ್ತದ ನೂರನೇ ವಾರ್ಷಿಕ ಘೋಷಣೆ ಸಮ್ಮೇಳನ ಇಂದು
ಕಾಸರಗೋಡು: ಸಮಸ್ತ ಕೇರಳ ಜಂಇಯತ್ತುಲ್ ಉಲಮದ ನೂರನೇ ವಾರ್ಷಿಕ ಘೋಷಣೆ ಸಮ್ಮೇಳನಕ್ಕೆ ಚಟ್ಟಂಚಾಲ್ ಮಾಲಿಕ್ ದಿನಾರ್ ನಗರದಲ್ಲಿ ಧ್ವಜಾರೋಹಣಗೊಂಡಿತು. ಈ ವೇಳೆ ಕೇರಳ ಮುಸ್ಲಿಂ ಜಮಾ ಯತ್ನ ರಾಜ್ಯ ಪ್ರಧಾನ ಕಾರ್ಯz ರ್ಶಿ ಇಬ್ರಾಹಿಮುಲ್ ಬುಖಾರಿ, ರಾಜ್ಯ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಸಖಾಫಿ, ಎ.ಪಿ. ಅಬ್ದುಲ್ಲ ಮುಸ್ಲಿಯಾರ್ ಜಂಟಿಯಾಗಿ ಧ್ವಜಾರೋಹಣಗೈದರು. ಹಲವು ಗಣ್ಯರು ಭಾಗವಹಿಸಿದರು. ಸಾಂಸ್ಕೃತಿಕ ಸಮ್ಮೇಳನವನ್ನು ಕರ್ನಾಟಕ ವಿಧಾನ ಸಭಾ ಅಧ್ಯಕ್ಷ ಯು.ಟಿ. ಖಾದರ್ ಉದ್ಘಾಟಿಸಿದರು. ಇಂದು ಸಂಜೆ ೪ಕ್ಕೆ ಘೋಷಣೆ ಸಮ್ಮೇಳನ ಆರಂಭ ಗೊಳ್ಳಲಿದೆ. ಕಾಂತಾಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ನೂರನೇ ವಾರ್ಷಿಕ ಘೋಷಣೆ ನಡೆಸುವರು. ಹಲವು ಗಣ್ಯರು ಭಾಗವಹಿಸಿದರು.