ಉಪ್ಪಳ ಬಿ.ಆರ್.ಸಿಯಲ್ಲಿ ಮಂಜೇಶ್ವರ ಉಪಜಿಲ್ಲಾ ಮಟ್ಟದ ಬರಹಕೂಟ

ಉಪ್ಪಳ:ಎಸ್ ಎಸ್ ಕೆ ಕಾಸರಗೋಡು ಬಿ ಆರ್ ಸಿ ಮಂಜೇಶ್ವರ ಇದರ ನೇತೃತ್ವದಲ್ಲಿ ಮಂಜೇಶ್ವರ ಬಿ ಆರ್ ಸಿ ಮಟ್ಟದ ಪ್ರತಿಭಾ ಕೇಂದ್ರಗಳ ಬರಹ ಕೂಟ ಕಾರ್ಯಾಗಾರ ಉಪ್ಪಳ ಬಿ ಆರ್ ಸಿ ಯಲ್ಲಿ ಜರಗಿತು. ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಶಮೀನ ಟೀಚರ್ ಉ¥್ತ[ಟಿಸಿ ಮಾತನಾಡಿ, ಪ್ರತಿಭಾ ಕೇಂದ್ರಗಳು ಪ್ರಾದೇಶಿಕ ಪರಿಸರದ ಮಕ್ಕಳ ಪ್ರತಿಭೆಯ ಅನಾವರಣ ಕೇಂದ್ರವಾಗಿದೆ. ಇದು ಮಕ್ಕಳ ಸುಪ್ತ ಪ್ರತಿಭೆಯನ್ನು ಬೆಳಕಿಗೆ ತರುವಲ್ಲಿ ಶ್ರಮವಹಿಸುತ್ತಿದ್ದು ಉತ್ತಮ ಅಡಿಪಾಯವನ್ನು ಒದಗಿಸುತ್ತಿದ್ದು ವೈಜ್ಞಾನಿಕ ಮನೋಭಾವವನ್ನು ಬೆಳೆಸುತ್ತಿದೆ ಎಂದರು. ಬಿ ಆರ್ ಸಿ ಟ್ರೈನರ್ ಜೋಯ್ ಅಧ್ಯಕ್ಷತೆ ವಹಿಸಿದ್ದರು. ಲೇಖಕಿ ಸ್ನೇಹಲತ ದಿವಾಕರ್, ಅಶೋಕ್ ಕೊಡ್ಲಮೊಗರು ಶುಭ ಹಾರೈಸಿದರು. ಬಿ ಆರ್ ಸಿ ಟ್ರೈನರ್ ಸುಮಾ ದೇವಿ ಸ್ವಾಗತಿಸಿ, ದಿವ್ಯಾ ಟೀಚರ್ ವಂದಿಸಿದರು ಮೋಹಿನಿ ಟೀಚರ್ ನಿರೂಪಿಸಿದರು. ನಂತರ ಕವಿತೆ ರಚನೆ ಹಾಗೂ ಕಥಾ ರಚನಾ ಕಮ್ಮಟ ಜರಗಿತು. ಸ್ನೇಹಲತ ದಿವಾಕರ್ ಸಂಪನ್ಮೂಲ ವ್ಯಕ್ತಿಯಾಗಿ ತರಗತಿ ನೀಡಿದರು. ಬಿ ಆರ್ ಸಿ ಕೋರ್ಡಿನೇಟರ್‌ಗಳಾದ ಚಂದ್ರಿಕಾ, ಪ್ರಸನ್ನ ಟೀಚರ್ ಸಹಕರಿಸಿದರು.

Leave a Reply

Your email address will not be published. Required fields are marked *

You cannot copy content of this page