ರಾಜ್ಯ ಶಾಲಾ ಕಲೋತ್ಸವಕ್ಕೆ ಚಾಲನೆ

ಕೊಲ್ಲಂ: ಏಷ್ಯಾದಲ್ಲೇ ಅತೀ ದೊಡ್ಡ ಮಕ್ಕಳ ಕಲೋತ್ಸವವಾಗಿ ರುವ ಕೇರಳ ರಾಜ್ಯ ಮಟ್ಟದ ಶಾಲಾ ಕಲೋತ್ಸವಕ್ಕೆ ಕೊಲ್ಲಂ ನಗರದಲ್ಲಿ ಇಂದು ಚಾಲನೆ ದೊರಕಿದೆ.

ಒಟ್ಟು ೨೪ ವೇದಿಕೆಗಳನ್ನು ಇದಕ್ಕಾಗಿ ನಿರ್ಮಿಸಲಾಗಿದೆ. ಇದ ರಲ್ಲಿ ಶಾಲಾ ಕಲಾಪ್ರತಿಭೆಗಳು ತಮ್ಮ ಕಲಾ ಪ್ರತಿಭೆಗಳನ್ನು ಪ್ರದರ್ಶಿಸು ವರು. ಎಲ್‌ಪಿ, ಹೈಸ್ಕೂಲ್ ಮತ್ತು  ಹೈಯರ್ ಸೆಕೆಂಡರಿ ವಿಭಾಗಗಳಿಂ ದಾಗಿ ಒಟ್ಟು  ೧೪,೦೦೦ ಕಲಾಪ್ರತಿ ಭೆಗಳು  ಕಲೋತ್ಸವದಲ್ಲಿ ಭಾಗವಹಿಸಿ ವೇದಿಕೆಗಳಲ್ಲಿ ತಮ್ಮ ಕಲೆಗಳನ್ನು ಅನಾವರಣಗೊಳಿಸು ವರು.  ವಿವಿಧ ರೀತಿಯ ಒಟ್ಟು ೨೩೯ ಸ್ಪರ್ಧೆಗಳು ಈ ಕಲೋತ್ಸವ ದಲ್ಲಿ ನಡೆಯಲಿದೆ. ಇಂದು ಬೆಳಿಗ್ಗೆ ನಡೆದ ವರ್ಣ ರಂಜಿತ ಸಮಾರಂಭದಲ್ಲಿ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ದೀಪ ಬೆಳಗಿಸುವ ಮೂಲಕ ಕಲೋತ್ಸವ ಉದ್ಘಾಟಿಸಿ ಚಾಲನೆ ನೀಡಿದರು.

Leave a Reply

Your email address will not be published. Required fields are marked *

You cannot copy content of this page