ಕಾಸರಗೋಡು: ಅಂಗಡಿಮೊಗರು ನಿವಾಸಿಯೋರ್ವರಿಗೆ ಆನ್‌ಲೈನ್ ಟ್ರೇಡಿಂಗ್ ಹೆಸರಲ್ಲಿ 42 ಲಕ್ಷ ರೂ. ಲಪಟಾಯಿಸಿದ ಪ್ರಕರಣದ ಆರೋಪಿಯನ್ನು ಆಂಧ್ರ ಪ್ರದೇಶದಿಂದ ಕಾಸರಗೋಡು ಸೈಬರ್ ಪೊಲೀಸರ ತಂಡ ಬಂಧಿಸಿದೆ. ಆಂಧ್ರಪ್ರದೇಶ ವಿಜಯವಾಡ ಕೃಷ್ಣಚಂದ್ರಪಾಡಲು ನಿವಾಸಿ ವಡಲಮುಡಿ ಫನಿ ಕುಮಾರ್ (40) ಬಂಧಿತ ಆರೋಪಿ. ಆತನನ್ನು ಬಳಿಕ ನ್ಯಾಯಾಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿ ಸಲಾಗಿದೆ. ಅಂಗಡಿಮೊಗರು ನಿವಾಸಿಯನ್ನು ವಾಟ್ಸಪ್ ಮೂಲಕ ಸಂಪರ್ಕಿಸಿ ವಾಟ್ಸಪ್‌ನ ಧನಿ ಟಿಆರ್‌ಡಿ ಎಂಬ ನಕಲಿ ಅಪ್ಲಿಕೇಶನ್ ಮೂಲಕ ಸಂಪರ್ಕಿಸಿ ಆನ್‌ಲೈನ್ ಟ್ರೇಡಿಂಗ್‌ನ ಹೆಸರಲ್ಲಿ 42,41,000 ರೂ. ಲಪಟಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ಈತನನ್ನು ಬಂಧಿಸಲಾಗಿದೆ.
2025 ಎಪ್ರಿಲ್ 4ರಿಂದ ಆರಂಭಗೊಂಡು ಎಪ್ರಿಲ್ 21ರ ನಡುವಿನ ಅವಧಿಯಲ್ಲಿ ಹಲವು ಬಾರಿಯಾಗಿ ಆರೋಪಿ ತನ್ನ ಹಣ ಲಪಟಾಯಿಸಿದ್ದನೆಂದು ಕಾಸರಗೋಡು ಸೈಬರ್ ಪೊಲೀಸ್ ಠಾಣೆಗೆ ಅಂಗಡಿಮೊಗರು ನಿವಾಸಿ ದೂರು ನೀಡಿದರ.ಅದರಂತೆ ನಡೆಸಲಾದ ತನಿಖೆಯಲ್ಲಿ ವಂಚನೆ ನಡೆದಿದ್ದು ಆಂಧ್ರಪ್ರದೇಶವನ್ನು ಕೇಂದ್ರೀಕರಿಸಿ ಆಗಿತ್ತೆಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಅದರಂತೆ ಪೊಲೀಸರು ಅಲ್ಲಿಗೆ ಸಾಗಿ ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಬಂಧಿತ ಆರೋಪಿ ಹೈದರಾಬಾದ್ ಶಾಚಿಬೋಳಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲೂ ದಾಖಲಿಸಲಾಗಿರುವ ಇದೇ ರೀತಿಯ ಇನ್ನೊಂದು ಪ್ರಕರಣದಲ್ಲೂ ಆರೋಪಿಯಾಗಿದ್ದ್ದಾನೆಂದು ಅದಕ್ಕೆ ಸಂಬಂಧಿಸಿ ಆತನನ್ನು ಬಂಧಿಸಿ ತೆಲಂಗಾನ ಸಂಘರೆಡ್ಡಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರಿಸಲಾ ಗಿತ್ತೆಂದು ಪೊಲೀಸರು ತಿಳಿಸಿದ್ದಾರೆ. ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ. ವಿಜಯ ಭರತ್ ರೆಡ್ಡಿ ನಿರ್ದೇಶ ಪ್ರಕಾರ ಕಾಸರಗೋಡು ಸೈಬರ್ ಕ್ರೈಂ ಪೊಲೀ ಸ್ ಠಾಣೆಯ ಉಸ್ತುವಾರಿ ಹೊಣೆ ಗಾರಿಕೆ ಹೊಂದಿರುವ ವಿದ್ಯಾನಗರ ಇನ್‌ಸ್ಪೆಕ್ಟರ್ ವಿಪಿನ್ ಯು.ಪಿ ಮೇಲ್ನೋಟದಲ್ಲಿ ಎಸ್‌ಐ ರವೀಂ ದ್ರನ್, ಎಎಸ್‌ಐ ರಂಜಿತ್ ಕುಮಾರ್, ಪ್ರಶಾಂತ್, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ದಿಲೀಶ್ ಮತ್ತು ಸಿವಿಲ್ ಪೊಲೀಸ್ ಆಫೀಸರ್ ವಿಪಿನ್ ಎಂಬವರನ್ನೊಳಗೊಂಡ ತಂಡ ಆರೋಪಿಯನ್ನು ಬಂಧಿಸಿದೆ.