ಯುವತಿಯ ಕಣ್ಣಿಗೆ ಮೆಣಸಿನಹುಡಿ ಎರಚಿ ಕಲ್ಲೆಸೆದು ಗಾಯಗೊಳಿಸಿದ ಆರೋಪ: ಕೇಸು ದಾಖಲು

ಮುಳ್ಳೇರಿಯ: ಯುವತಿಯ ಕಣ್ಣಿಗೆ ಮೆಣಸಿನ ಹುಡಿ ಎರಚಿ ಕಲ್ಲೆಸೆದು ಗಾಯಗೊಳಿಸಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ಆದೂರು ಪೊಲೀಸರು ಓರ್ವನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಅಡೂರು ಪಾಂಡಿ ಬಳವಂತಡ್ಕದ ಅನುಂಜ ಕೆ. (18) ಎಂಬವರು ಈ ದೂರು ನೀಡಿದ್ದು, ಅದರಂತೆ ಬಳವಂತಡ್ಕದ ಶಂಕರನ್ ವಿ. ಎಂಬವರ ವಿರುದ್ಧ ಆದೂರು ಪೊಲೀಸರು ಕೇಸು ದಾಖಲಿಸಿದ್ದಾರೆ.

ನಿನ್ನೆ ಮಧ್ಯಾಹ್ನ ಬಳವಂತಡ್ಕ ಸೇತುವೆ ಬಳಿ ಆರೋಪಿ ತನ್ನ ಕಣ್ಣಿಗೆ ಮೆಣಸಿನ ಹುಡಿ ಎರಚಿ ಕಲ್ಲೆಸೆದು ಗಾಯಗೊಳಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಯುವತಿ ಆರೋಪಿಸಿದ್ದಾಳೆ.

You cannot copy contents of this page