ಪೆರ್ಲ: ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಪೆರ್ಲ ಘಟಕದ ದತ್ತಿ ನಿಧಿ ಯೋಜನೆಯನ್ವಯ ಬಜಕೂಡ್ಲು ನಡುಬೈಲು ದಿ| ಪುರುಷೋತ್ತಮ ಪೂಜಾರಿಯವರ ಪುತ್ರಿ ದಿಯಾಳಿಗೆ ಶಿಕ್ಷಣಕ್ಕಾಗಿ ಆರ್ಥಿಕ ಸಹಾಯ ಹಸ್ತಾಂತರಿಸಲಾಯಿತು. ದಿ| ಪುರುಷೋತ್ತಮರ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ದತ್ತಿ ನಿಧಿ ಪ್ರಾಯೋಜಕರಾದ ಪೆರ್ಲ ಅಮೆಕ್ಕಳದ ಬೇಕರಿ ಮಾಲಕ ದಿನೇಶ್ ಜಿ.ಕೆ ಆರ್ಥಿಕ ಸಹಾಯವನ್ನು ಹಸ್ತಾಂತರಿಸಿದರು. ಸಂಘದ ಕೇಂದ್ರ ಸಮಿತಿ ಅಧ್ಯಕ್ಷ ಬಿ.ಪಿ. ಶೇಣಿ, ಕಾರ್ಯದರ್ಶಿ ಅಖಿಲೇಶ್ ಕಾನ, ಬೆದ್ರಂಪಳ್ಳ ಪ್ರಾದೇಶಿಕ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಮಾಸ್ತರ್ ನಡುಬೈಲು, ವಿನೀತ್ ರಾಜ್ ಅಮೆಕ್ಕಳ , ದಿ| ಪುರುಷೋತ್ತಮರ ಪತ್ನಿ ಚಂದ್ರಾವತಿ ಉಪಸ್ಥಿತರಿದ್ದರು. ಪುರುಷೋತ್ತಮರ ಇನ್ನೋರ್ವೆ ಪುತ್ರಿ ದೀಕ್ಷಿತಾರ ಶಿಕ್ಷಣಕ್ಕೆ ನಿವೃತ್ತ ಶಿಕ್ಷಕ ಉಮೇಶ್ ಕೆ ಪೆರ್ಲ ಪ್ರಾಯೋಜಕತ್ವ ಪೆರ್ಲದಲ್ಲಿ ನಡೆದ ಬ್ರಹ್ಮಶ್ರೀ ನಾರಾ ಯಣ ಗುರು ಜಯಂತಿ ಕಾರ್ಯಕ್ರಮ ದಲ್ಲಿ ಮೊತ್ತವನ್ನು ಉಮೇಶ ಕೆ ಪೆರ್ಲ ಫಲಾನುಭವಿಗಳಿಗೆ ಹಸ್ತಾಂತರಿಸಿದರು.
