ಮುಂದುವರಿದ ಅಬಕಾರಿ ಕಾರ್ಯಾಚರಣೆ : ಅಕ್ರಮ ಮದ್ಯ, ವಾಶ್ ವಶ
ಕಾಸರಗೋಡು: ಜಿಲ್ಲೆಯಲ್ಲಿ ಅಬಕಾರಿ ತಂಡ ಆರಂಭಿಸಿರುವ ಅಬಕಾರಿ ದಾಳಿ ಇನ್ನೂ ಮುಂದುವರಿ ಯುತ್ತಿದ್ದು, ಇದರಂತೆ ಜಿಲ್ಲೆಯ ವಿವಿಧೆಡೆಗಳಲ್ಲಾಗಿ ನಿನ್ನೆ ನಡೆಸಲಾದ ಕಾರ್ಯಾಚರಣೆಯಲ್ಲಿ ಕರ್ನಾಟಕ ನಿರ್ಮಿತ ಮದ್ಯ ಮತ್ತು ವಾಶ್ (ಹುಳಿರಸ) ಪತ್ತೆಹಚ್ಚಿ ವಶಪಡಿಸಲಾಗಿದೆ.
ಬದಿಯಡ್ಕ ಅಬಕಾರಿ ರೇಂಜ್ ಕಚೇರಿಯ ಎಕ್ಸೈಸ್ ಇನ್‌ಸ್ಪೆಕ್ಟರ್ ವಿನು ನೇತೃತ್ವದ ತಂಡ ಅಡೂರು ಬಾಲನಡ್ಕದ ಎಡೋಣಿಯಲ್ಲಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ೧೮೦ ಎಂಎಲ್‌ನ ೯೬ ಟೆಟ್ರಾ ಪ್ಯಾಕೆಟ್ (೧೭.೨೮ ಲೀಟರ್) ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿ ಸಿಕೊಂಡಿದೆ. ಈ ಕಾರ್ಯಾ ಚರಣೆಯಲ್ಲಿ ಸಿಇಒಗಳಾದ ಮನೋಜ್ ಪಿ, ಜೋನ್ಸನ್ ಪೋಲ್, ಜನಾರ್ದನನ್, ಮೋಹನ್ ಕುಮಾರ್, ಪ್ರಭಾಕರನ್, ಸದಾನಂದನ್ ಮತ್ತು ಚಾಲಕ ರಾಧಾಕೃಷ್ಣನ್ ಎಂಬಿವರು ಒಳಗೊಂಡಿದ್ದರು.
ವೆಳ್ಳರಿಕುಂಡ್ ಪಾಲಾವ ಯಲ್‌ನಲ್ಲಿ ನೀಲೇಶ್ವರ ಅಬಕಾರಿ ರೇಂಜ್ ಕಚೇರಿಯ ಪ್ರಿವೆಂಟೀವ್ ಆಫೀಸರ್ ಅನೀಶ್ ಕುಮಾರ್ ನೇತೃತ್ವದ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ರಸ್ತೆ ಬದಿ ಬಚ್ಚಿಡಲಾಗಿದ್ದ ಕಳ್ಳಭಟ್ಟಿ ಸಾರಾ ಯಿ ತಯಾರಿಸುವ ೫೦ ಲೀಟರ್ ವಾಶ್ (ಹುಳಿರಸ) ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಅದರಂತೆ ಅದನ್ನು ಅಲ್ಲಿ ಬಚ್ಚಿಟ್ಟಿರುವವರನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.
ಇನ್ನು ಕಾಸರಗೋಡು ಕರಂದಕ್ಕಾಡ್ ರಾಷ್ಟ್ರೀಯ ಹೆದ್ದಾರಿ ಬಳಿಯ ವಿದ್ಯುತ್ ಕಂಬವೊಂದರ ಬಳಿ ಅಕ್ರಮವಾಗಿ ಬಚ್ಚಿಡಲಾಗಿದ್ದ ೬.೦೬ ಲೀಟರ್ ಕರ್ನಾಟಕ ನಿಮಿತ ಮದ್ಯವನ್ನು ಕಾಸರಗೋಡು ಅಬಕಾರಿ ಸರ್ಕಲ್ ಕಚೇರಿಯ ಪ್ರಿವೆಂಟೀವ್ ಆಫೀಸರ್ ಮೋಹನನ್ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಆದರೆ ಈ ಬಗ್ಗೆ ಯಾರನ್ನೂ ಬಂಧಿಸಲಾಗಿಲ್ಲ.