ಉಪ್ಪಳ: ಉಪ್ಪಳ ರೈಲ್ವೇ ನಿಲ್ದಾಣ ಪರಿಸರ ನಿವಾಸಿ ನಿವೃತ್ತ ಕಂಪೌAಡರ್ ಶೀನ.ಎ [75] ನಿಧನರಾದರು. ಅಸೌಖ್ಯದಿಂದ ಬಳಲುತ್ತಿದ್ದ ಅವರು ಎರಡು ದಿನಗಳ ಹಿಂದೆ ಉಲ್ಬಣಗೊಂಡು ಚಿಕಿತ್ಸೆಯಲ್ಲಿದ್ದರು. ನಿನ್ನೆ ರಾತ್ರಿ ನಿಧನ ಹೊಂದಿದರು. ಇವರು ಉಪ್ಪಳ ಕೆ.ಎನ್.ಎಚ್ ಆಸ್ಪತ್ರೆಯಲ್ಲಿ ಸುಮಾರು 40 ವರ್ಷಗಳ ಕಾಲ ಕಂಪೌAಡರ್ ಆಗಿ ನಿವೃತ್ತಿಹೊಂದಿದ್ದಾರೆ. ಮೃತರು ಪತ್ನಿ ಶಾಲಿನಿ, ಮಕ್ಕಳಾದ ಕಿರಣ್ ಕುಮಾರ್, ಚೈತ್ರ, ಅಳಿಯ ಅನಿಲ್ ಪುಳಿಕುತ್ತಿ, ಸಹೋದರಿಯರಾದ ಲಲಿತಾ, ಶಾರದಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಚೆರುಗೋಳಿ ಹಿಂದೂ ರುದ್ರಭೂಮಿ ಯಲ್ಲಿ ಅಂತ್ಯಸAಸ್ಕಾರ ನಡೆಯಿತು.





