ವಿ.ಹಿಂ.ಪ ಕಾಸರಗೋಡು ಪ್ರಖಂಡದಿಂದ ಸಾಮೂಹಿಕ ಗೋಪೂಜೆ

ಕಾಸರಗೋಡು: ವಿಶ್ವ ಹಿಂದೂ ಪರಿಷತ್ ಕಾಸರಗೋಡು ಪ್ರಖಂಡ ವತಿಯಿಂದ ಸಾಮೂಹಿಕ ಗೋಪೂಜೆ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನ ದಲ್ಲಿ ಜರಗಿತು. ವೇದಮೂರ್ತಿ ನಾಗೇಂದ್ರ ಭಟ್ ಉದ್ಘಾಟಿಸಿ ಗೋವಿನ ಮಹತ್ವದ ಬಗ್ಗೆ ವಿವರಿಸಿ ದರು. ಕಾಸರಗೋಡು ಪ್ರಖಂಡ ಗೌರವಾಧ್ಯಕ್ಷ ಕೆ.ಎನ್.ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸಿದರು. ಮುಖ್ಯ ಅಥಿತಿಯಾಗಿದ್ದ ಚಂದ್ರಮೋಹನ್ ಗೋಪೂಜೆ ಬಗ್ಗೆ ವಿವರಿಸಿದರು. ವಿ.ಎಚ್.ಪಿ. ಹಿರಿಯ ಕಾರ್ಯಕರ್ತ ಎ.ಟಿ.ನಾಯಕ್ ಉಪಸ್ಥಿತರಿದ್ದರು. ಶ್ರೀ ವೆಂಕಟ್ರಮಣ ಬಾಲಗೋಕುಲದ ಮಕ್ಕಳಾದ ಅನುಶ್ರೀ ಮತ್ತು ಛಾಯಾಶ್ರೀ ಗೋವಿನ ಹಾಡಿನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಪ್ರಖಂಡ ಉಪಾಧ್ಯಕ್ಷ ಕೆ.ಎನ್.ರಾಮಕೃಷ್ಣ ಹೊಳ್ಳ ಸ್ವಾಗತಿಸಿ, ಪ್ರಖಂಡ ಅಧ್ಯಕ್ಷ ಗುರುಪ್ರಸಾದ್ ಕೋಟೆಕಣಿ ಪ್ರಸ್ತಾವಿಸಿದರು. ಕಾರ್ಯದರ್ಶಿ ಕಿಶೋರ್ ಕುಮಾರ್ ನಿರೂಪಿಸಿ, ವಿ.ಎಚ್.ಪಿ. ಹಿರಿಯ ಕಾರ್ಯಕರ್ತ ಲಕ್ಷ್ಮೀಕಾಂತ ವಂದಿಸಿದರು.

You cannot copy contents of this page