ಕಾಸರಗೋಡು: ಜಿಲ್ಲೆಯಲ್ಲಿ ೯ ಸಬ್ ರಿಜಿಸ್ಟ್ರಾರ್ ಕಚೇರಿಗಳು, ಜಿಲ್ಲಾ ರಿಜಿಸ್ಟ್ರಾರ್ ಕಚೇರಿ ಸೋಮವಾರದಿಂದ ಸಂಪೂರ್ಣ ಡಿಜಿಟಲೈಸೇಷನ್ ಆಗಲಿದೆ. ಪ್ರಮಾಣಪತ್ರಗಳು, ದಾಖಲೆ ಗಳನ್ನು ಡಿಜಿಟಲೈಸೇಷನ್ ನಡೆಸಿ ಅದರ ಪ್ರತಿಗಳು ಇನ್ನು ಪೂರ್ಣ ವಾಗಿ ಆನ್ಲೈನ್ ಮೂಲಕ ಲಭ್ಯಗೊಳಿಸಲಾಗುವುದು. ಆಧಾರ ನಷ್ಟಗೊಂಡವರಿಗೂ, ಸಾಲಕ್ಕೆ ಬ್ಯಾಂಕ್ ಗಳಿಗೆ ಸಲ್ಲಿಸಬೇಕಾದ ದಾಖಲೆಗಳಿಗೆ, ರೀ ಸರ್ವೇ, ಕಂದಾಯ ಇಲಾಖೆಗೆ ಸಂಬಂಧಿಸಿದ ಸೇವೆಗಳಿಗೆ ಆಧಾ ರದ ಪ್ರತಿ ಅಗತ್ಯವಿದೆ. ಡಿಜಿಟ ಲೈಸೇಷನ್ ಜ್ಯಾರಿಗೆ ಬಂದ ಬಳಿಕ ಅಗತ್ಯವಿರುವವರಿಗೆ ದಾಖಲೆ ಗಳನ್ನು ಆನ್ಲೈನ್ನಲ್ಲಿ ನೀಡಲಾ ಗುವುದು. ಇದರಿಂದ ಸಾರ್ವಜನಿ ಕರಿಗೆ ಕಚೇರಿಗಳಿಗೆ ಹತ್ತಿ ಇಳಿದು ಸಂಕಷ್ಟಪಡುವುದು ತಪ್ಪಲಿದೆ.
