ಡ್ರೀಮ್ ಫ್ಲವರ್ ಐವಿಎಫ್ ಸೆಂಟರ್‌ನ ವಾರ್ಷಿಕ ನಾಳೆ

ಕಾಸರಗೋಡು: ಕಾಸರಗೋಡು ನಗರದ ಬ್ಯಾಂಕ್ ರಸ್ತೆ ಬಳಿ ಕಾರ್ಯ ವೆಸಗುತ್ತಿರುವ ಡ್ರೀಮ್ ಫ್ಲವರ್ ಐವಿಎಫ್ ಸೆಂಟರ್‌ನ ೧೨ನೇ ವಾರ್ಷಿ ಕ ಜನವರಿ ೧೪ರಂದು ಕಾಸರಗೋಡು ಮುನಿಸಿಪಲ್ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆಯಲಿದೆ.

 ಸಂತಾನ ಭಾಗ್ಯ ಹೊಂದದ ದಂಪತಿಗಳಿಗೆ ಆ ಭಾಗ್ಯ ಲಭಿಸುವಂತೆ ಮಾಡುವಲ್ಲಿ ಈ ಕೇಂದ್ರ ಮಹತ್ತರ ಕೊಡುಗೆ ನೀಡುತ್ತಾ ಬಂದಿದೆ. ಇದರಂತೆ ಕಳೆದ ೧೨ ವರ್ಷಗಳಲ್ಲಿ ೬೦೦೦ದಷ್ಟು ದಂಪತಿಗೆ ಸೂಕ್ತ ಚಿಕಿತ್ಸೆ ಕೊಡುವ ಮೂಲಕ ಅವರಿಗೆ ಸಂತಾನ ಭಾಗ್ಯ ಒದಗಿಸಿದೆ. ಅದರಿಂದಾಗಿ ೧೨ನೇ ವಾರ್ಷಿಕೋ ತ್ಸವ ದಿನದಂದು ೬೦೦೦ ಶಿಶು ಜನನ ಕಾರ್ಯಕ್ರಮವನ್ನು ಜತೆಗೆ ನಡೆಸಲಾಗುವುದು.

ಕಾರ್ಯಕ್ರಮವನ್ನು ಅಪರಾಹ್ನ ೩ ಗಂಟೆಗೆ  ಐಎಂಎ ಕೇರಳ ಘಟಕ ಅಧ್ಯಕ್ಷ ಡಾ| ಜೋಸೆಫ್ ಬೆನೊವನ್ ಉದ್ಘಾಟಿಸುವರು. ನಮ್ಮ ‘ಐವಿ ಎಫ್ ನ ಯಾತ್ರೆ’ ಎಂಬ ವಿಷಯದ ಬಗ್ಗೆ ಡ್ರೀಮ್ ಫ್ಲವರ್ ಐವಿಎಫ್ ಸೆಂಟ ರ್‌ನ ನಿರ್ದೇಶಕ ಹಾಗೂ ಚೀಫ್ ಇನ್‌ಫ ರ್ಟಿಲಿಟೀ ಸ್ಪೆಷಲಿಸ್ಟ್ ಡಾ| ಜ ಯಲಕ್ಷ್ಮಿ ಸೂರಜ್ ಉಪನ್ಯಾಸ ನೀಡುವರು. ಐಎಂಎ ಕಾಸರಗೋಡು ಉಪಾಧ್ಯಕ್ಷ ಡಾ| ಹರಿಕಿರ ಣ್ ಬಂಗೇರ, ನಿವೃತ್ತ ಪಬ್ಲಿಕ್ ಪ್ರೋಸಿ ಕ್ಯೂಟರ್ ನ್ಯಾಯ ವಾದಿ ಕೆ. ಬಾಲಕೃಷ್ಣ ನ್ ಮತ್ತು ಐವಿಎಫ್ ಸೆಂಟರ್‌ನ ಚೀಫ್ ಎಂಬ್ರೋಲೋ ಜಿಸ್ಟ್ ಡಾ| ಎಲಿಜಬೆತ್, ಮ್ಯಾಥ್ಯು ಶುಭಾಶಂಸ ನೆಗೈಯ್ಯುವರು. ಐವಿಎಫ್ ಸೆಂಟ ರ್‌ನ ನಿರ್ದೇಶಕ ಡಾ| ಕೆ.ಪಿ. ಸೂ ರಜ್, ಅಡ್ಮಿನಿಸ್ಟ್ರೇ ಟಿವ್ ಆಫೀಸ ರ್ ಸುರೇಂದ್ರನ್ ಕೆ.ಜಿ ಮೊದಲಾದ ವರು ಭಾಗವಹಿ ಸುವರೆಂದು   ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋ ಷ್ಠಿಯಲ್ಲಿ ಪ್ರಸ್ತುತ ಕೇಂದ್ರದ ಅಡ್ಮಿನಿ ಸ್ಟ್ರೇಟಿವ್ ಆಫೀಸರ್ ಸುರೇಂದ್ರನ್   ಕೆ.ಟಿ,  ಜಿನಾಜೋರ್ಜ್ ಮತ್ತು ಅಬ್ಸಲ್ ಬಷೀರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page