ಬದಿಯಡ್ಕ: ನೆಕ್ರಾಜೆ ಗ್ರಾಮದ ನೆಲ್ಲಿಕಟ್ಟೆ ರಸ್ತೆ ಬಳಿ ಬದಿಯಡ್ಕ ಪೊಲೀಸರು ನಿನ್ನೆ ಸಂಜೆ ನಡೆಸಿದ ಕಾರ್ಯಾಚರಣೆಯಲ್ಲಿ ಮಾದಕ ದ್ರವ್ಯವಾದ 0.39 ಗ್ರಾಂ ಎಂಡಿಎಂಎ ಕೈವಶವಿರಿಸಿದ ಆರೋಪದಂತೆ ಇಬ್ಬರನ್ನು ಸೆರೆ ಹಿಡಿದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಾಡಿ ಎದಿರ್ ತೋಡು ಬದರ್ ನಗರದ ಮೊಹಮ್ಮದ್ ಅಜ್ನಾಸ್ ಎ. (26) ಮತ್ತು ಮುಳ್ಳೇರಿಯ ಮೊಂದನ್‌ಪ್ಪಾರ ಹೌಸ್‌ನ ಸುಲೈಮಾನ್ ಅಫ್ರೀದಿ (28) ಬಂಧಿತ ಆರೋಪಿಗಳು. ಬದಿಯಡ್ಕ ಪೊಲೀಸ್ ಠಾಣೆಯ ಎಸ್‌ಐ ಸುನಿಲ್ ಕುಮಾರ್ ಟಿ.ರ ನೇತೃತ್ವದ ಪೊಲೀಸರ ತಂಡ ಈ ಕಾರ್ಯಾಚರಣೆ ನಡೆಸಿದೆ. ಬಂಧಿತರು ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದರೆಂದೂ, ಪೊಲೀಸರನ್ನು ಕಂಡಾಗ ಅವರು ಅಲ್ಲಿಂದ ಹಿಂದಕ್ಕೆ ಸರಿಯಲೆತ್ನಿಸಿದಾಗ ಶಂಕೆಗೊಂಡು ಅವರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಅವರ ಕೈಯಲ್ಲಿ ಎಂಡಿಎಂಎ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.






