ನಿಲ್ಲಿಸಿದ್ದ ಲಾರಿಯ  ಹಿಂಬದಿಗೆ ಬಸ್ ಢಿಕ್ಕಿ : ಓರ್ವ ಪ್ರಯಾಣಿಕನಿಗೆ ಗಂಭೀರ

ಉಪ್ಪಳ:  ಮಣ್ಣಂಗುಳಿ ರಸ್ತೆ ಬದಿ ನಿಲ್ಲಿಸಲಾಗಿದ್ದ ಲಾರಿಯ ಹಿಂಬದಿಗೆ ಖಾಸಗಿ ಬಸ್ ಢಿಕ್ಕಿ ಹೊಡೆದು ಪ್ರಯಾಣಿಕ ನೋರ್ವ ಗಂಭೀರ ಗಾಯಗೊಂಡ ಘಟನೆ ನಿನ್ನೆ ಸಂಜೆ ಸಂಭವಿಸಿದೆ.  ಮಣ್ಣಂಗುಳಿಯ ಇಸ್ಮಾಯಿಲ್ ಎಂಬವರು ಗಾಯಗೊಂಡಿದ್ದು, ಇವರನ್ನು ದೇರಳಕಟ್ಟೆಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇವರ ತಲೆ ಹಾಗೂ ಕಣ್ಣಿಗೆ ಗಾಯಗೊಂಡಿರು ವುದಾಗಿ  ಆಸ್ಪತ್ರೆ ಮೂಲಗಳು ತಿಳಿಸಿವೆ. ಅಪಘಾತದಲ್ಲಿ ಗಾಯ ಗೊಂಡ ಇತರರನ್ನು  ಬಸ್ ಸಿಬ್ಬಂದಿಗಳು ಹಾಗೂ ಸ್ಥಳೀಯರು ಸೇರಿ ಮಂಗಲ್ಪಾಡಿ ಸರಕಾರಿ ಆಸ್ಪತ್ರೆ ಹಾಗೂ ಉಪ್ಪಳದ ಖಾಸಗಿ ಆಸ್ಪತ್ರೆಗಳಿಗೆ ತಲುಪಿಸಿ ಚಿಕಿತ್ಸೆ ನೀಡಿ ಬಿಡುಗಡೆಗೊಳಿಸಲಾಗಿದೆ.

ನಿನ್ನೆ ಸಂಜೆ ೬.೪೫ರ ವೇಳೆ ಅಪಘಾತವುಂಟಾಗಿದೆ. ಮಣ್ಣಂಗುಳಿ ರಸ್ತೆ ಬದಿ ಲಾರಿಯೊಂದು ಟಯರ್ ಪಂಕ್ಚರ್ ಆದ ಹಿನ್ನೆಲೆಯಲ್ಲಿ ನಿಲ್ಲಿಸಲಾಗಿತ್ತು.  ಬಾಯಾರಿನಿಂದ ಉಪ್ಪಳಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಎದುರಿನಿಂದ ಬಂದ ವಾಹನವೊಂ ದಕ್ಕೆ ಸೈಡ್ ನೀಡುವ ವೇಳೆ ನಿಯಂತ್ರಣ ತಪ್ಪಿ ನಿಲ್ಲಿಸಿದ್ದ ಲಾರಿಯ ಹಿಂಭಾಗಕ್ಕೆ ಢಿಕ್ಕಿ ಹೊಡೆದು ಈ ಅಪಘಾತವುಂ ಟಾಗಿದೆ. ಬಸ್‌ನ ಮುಂಭಾಗಕ್ಕೂ ಹಾನಿಯುಂಟಾಗಿದೆ. ಇದೇ ವೇಳೆ ಅಪಘಾತ ಅಥವಾ ಇತರ ಕಾರಣಗಳಿಂದ ವಾಹನಗಳನ್ನು ರಸ್ತೆಯಲ್ಲೇ ನಿಲ್ಲಿಸುವುದು ಅಪಘಾತಕ್ಕೆ ಕಾರಣವಾಗುತ್ತಿದೆಯೆಂದು ನಾಗರಿಕರು ತಿಳಿಸುತ್ತಿದ್ದಾರೆ.

You cannot copy contents of this page