ಅಂಕ ಕಡಿಮೆ: ತಾಯಿ ಗದರಿಸಿದ ಬೆನ್ನಲ್ಲೇ ಬಾಲಕ ನೇಣುಬಿಗಿದು ಸಾವು

ಕೊಲ್ಲಂ: ಪರೀಕ್ಷೆ ಯಲ್ಲಿ ಅಂಕ ಕಡಿಮೆ ಯಾದುದರಿಂದ ತಾಯಿ ಗದರಿಸಿದ ಬೆನ್ನಲ್ಲೇ 11ರ ಹರೆಯದ ಬಾಲಕ ನೇಣುಬಿಗಿದು ಸಾವಿಗೀಡಾದ ಘಟನೆ ನಡೆದಿದೆ. ಕೊಲ್ಲಂ ನೆಡುಂ ಬನ್ ಕಾವಿಲ್ ಸೊಸೈಟಿಮುಖ್ ಎಂಬಲ್ಲಿನ ಅನಿಲ್ ಕುಮಾರ್-ರೇಷ ದಂಪತಿಯ ಪುತ್ರ ದೇವದರ್ಶ್ ಮೃತ ವಿದ್ಯಾರ್ಥಿ. ನಿನ್ನೆ ಸಂಜೆ ಮನೆಯ ಕಿಟಿಕಿಯಲ್ಲಿ ಈತ ನೇಣುಬಿಗಿದು  ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾನೆ.  ಬಾಲಕನಿಗೆ ಪರೀಕ್ಷೆಯಲ್ಲಿ ಅಂಕ ಕಡಿಮೆಯಾಗಿದೆಯೆಂದೂ  ಅಧ್ಯಾಪಿಕೆ ತಾಯಿಗೆ ಫೋನ್ ಕರೆ ಮಾಡಿ ತಿಳಿಸಿದ್ದರು.  ಇದರಿಂದ  ತಾಯಿ ಬಾಲಕನನ್ನು ಗದರಿಸಿದ್ದರೆನ್ನ ಲಾಗಿದೆ. ಇದರಿಂದ ತೀವ್ರ ನೊಂದು ಬಾಲಕ ನೇಣುಬಿಗಿದು ಸಾವಿಗೀಡಾಗಿ ರುವುದಾಗಿ ಹೇಳಲಾಗುತ್ತಿದೆ.

You cannot copy contents of this page