ಮಟ್ಕಾ: ಓರ್ವ ಸೆರೆ
ಮಂಜೇಶ್ವರ: ಹೊಸಂಗಡಿಯಲ್ಲಿ ನಿನ್ನೆ ಸಂಜೆ ಮಟ್ಕಾ ನಿರತನಾಗಿದ್ದ ಓರ್ವನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಉದ್ಯಾವರ ಕೆ.ಜೆ.ಎಂ ರೋಡ್ನ ಮನೋಜ್ ಕುಮಾರ್ (೪೯) ಬಂಧಿತ ವ್ಯಕ್ತಿ. ಈತನ ಕೈಯಿಂದ ೬೧೦ ರೂಪಾಯಿ ವಶಪಡಿ ಸಲಾಗಿ ದೆಯೆಂದು ಪೊಲೀಸರು ತಿಳಿಸಿದ್ದಾರೆ.
ಪಾನ್ ಮಸಾಲೆ ಸಹಿತ ಓರ್ವ ಸೆರೆ
ಮಂಜೇಶ್ವರ: ನಿಷೇಧಿತ ಪಾನ್ ಮಸಾಲೆ ಕೈವಶವಿರಿಸಿಕೊಂಡಿದ್ದ ಓರ್ವನನ್ನು ಮಂಜೇಶ್ವರ ಎಸ್ಐ ಪ್ರಶಾಂತ್ ಸೆರೆಹಿಡಿದಿದ್ದಾರೆ. ಪೊಸೋಟ್ ನಿವಾಸಿ ಮೂಸಕುಂಞಿ (೪೬) ಬಂಧಿತ ವ್ಯಕ್ತಿ. ಈತನ ಕೈಯಿಂದ ೬೪ ಪ್ಯಾಕೆಟ್ ಪಾನ್ ಮಸಾಲೆ ವಶಪಡಿಸಲಾಗಿದೆ.