ಕಾಸರಗೋಡು: ಜನವರಿ 1ರಿಂದ ಕಾಸರಗೋಡಿನಿಂದ ಆರಂಭಿಸುವ ಕೇರಳ ಯಾತ್ರೆಯ ಉದ್ಘಾಟನಾ ಸಮ್ಮೇಳನ ನಡೆಯುವ ಚೆರ್ಕಳ ನೂರುಲ್ ಎಂ.ಎ. ಉಸ್ತಾದ್‌ನಗರದಲ್ಲಿ ಪ್ರಧಾನ ವೇದಿಕೆಯ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಸ್ವಾಗತ ಸಮಿತಿ ಅಧ್ಯಕ್ಷ ಅಬ್ದುಲ್ ಖಾಫಿರ್ ಹಾಜಿ ಚೇರೂರು ಚಾಲನೆ ನೀಡಿದರು. ಬಿ.ಎಸ್. ಅಬ್ದುಲ್ಲ ಕುಂಞಿ ಫೈಸಿ, ಕಾಟಿಪ್ಪಾರ ಅಬ್ದುಲ್ ಖಾದರ್ ಸಖಾಫಿ, ಬಾಯಾರ್ ಸಿದ್ದಿಕ್ ಸಖಾಫಿ ಸಹಿತ ಹಲವರು ಭಾಗವಹಿಸಿದರು.







