ಕೇರಳ ಮೋದಿಯವರೊಂದಿಗೆ ಕೈಬೆಸೆಯುತ್ತಿದೆ-ಪಿ.ಕೆ. ಕೃಷ್ಣದಾಸ್
ಕಾಸರಗೋಡು: ಎಡರಂಗ ಮತ್ತು ಐಕ್ಯರಂಗಗಳನ್ನು ಉಪೇಕ್ಷಿಸಿ ಕೇರಳದ ಜನತೆ ಪ್ರಧಾನಮಂತ್ರಿ ನರೇಂದ್ರಮೋದಿಯವರ ಜೊತೆ ಕೈಬೆಸೆಯತೊಡಗಿದ್ದಾರೆಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಕೆ. ಕೃಷ್ಣದಾಸ್ ಹೇಳಿದ್ದಾರೆ.
ಎನ್ಡಿಎ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ರ ನೇತೃತ್ವದಲ್ಲಿ ಜನವರಿ ೨೭ರಂದು ಕಾಸರಗೋಡಿನಿಂದ ಪ್ರಯಾಣ ಆರಂಭಿಸಲಿರುವ ಕೇರಳ ಪಾದಯಾತ್ರೆಯ ಯಶಸ್ವಿಗಾಗಿ ನಿನ್ನೆ ಸಂಜೆ ಕಾಸರಗೋಡು ಮುನಿಸಿಫಲ್ ಕಾನ್ಫರೆನ್ಸ್ ಹಾಲ್ನಲ್ಲಿ ನಡೆದ ಸ್ವಾಗತ ಸಮಿತಿ ರೂಪೀಕರಣ ಸಭೆಯನ್ನು ಉದ್ಘಾಟಿಸಿ ಕೃಷ್ಣದಾಸ್ ಮಾತನಾಡುತ್ತಿದ್ದರು.
ಪ್ರಧಾನಮಂತ್ರಿ ಮೋದಿಯವರ ಸಂದರ್ಶನ ಕೇರಳದಲ್ಲಿ ಒಂದು ಇತಿಹಾಸವಾಗತೊಡಗಿದೆ. ಇದು ರಾಜ್ಯದಲ್ಲಿ ರಾಜಕೀಯ ಧ್ರುವೀಕರ ಣದ ವೇದಿಕೆಯಾಗಿ ಮಾರ್ಪಡ ತೊಡಗಿದೆ. ಮೋದಿಯವರ ನೇತೃತ್ವದಲ್ಲಿ ಹೇಗೆ ನವಭಾರತ ಸೃಷ್ಟಿಯಾಗುತ್ತಿದೆಯೋ ಅದೇ ರೀತಿ ನವಕೇರಳವೂ ಈಗ ಸೃಷ್ಟಿಯಾಗತೊಡಗಿದೆ. ಕೇರಳದಲ್ಲಿ ಮೋದಿ ಮಂತ್ರ ಮೊಳಗತೊಡಗಿದೆ. ಇದನ್ನು ಕಂಡ ಎಡರಂಗ ಮತ್ತು ಐಕ್ಯರಂಗಗಳು ಈಗ ಕಂಗಾಲಾಗಿವೆ. ಬಿಜೆಪಿಯನ್ನು ಕೇರಳ ಜನತೆ ಅಂಗೀಕರಿಸದು ಎಂದು ಕಾಂಗ್ರೆಸ್ ಮತ್ತು ಸಿಪಿಎಂ ನಂಬಿತ್ತು. ಆದರೆ ಅವರ ಅಂತಹ ನಂಬುಗೆಗ ಳನ್ನೆಲ್ಲವನ್ನು ನುಚ್ಚುನೂರುಗೊಳಿಸಿ ಕೇರಳದ ಜನತೆ ಮೋದಿಯವರ ಗ್ಯಾರೆಂಟಿಯಲ್ಲಿ ಈಗ ಅಪಾರ ನಂಬುಗೆ ಇರಿಸತೊಡಗಿದ್ದಾರೆ. ಕೇರಳದಲ್ಲಿ ಕೇಂದ್ರ ಸರಕಾರ ಜ್ಯಾರಿಗೊಳಿಸಿದ ಎಲ್ಲಾ ಅಭಿವೃದ್ಧಿ ಯೋಜನೆಗಳನ್ನು ಜನರು ಅರಿತುಕೊಳ್ಳತೊಡಗಿದ್ದಾರೆ. ಅದು ಬಿಜೆಪಿಗೆ ಅನುಕೂಲಕರವಾ ಗಲಿದೆಯೆಂದು ಕೃಷ್ಣದಾಸ್ ಹೇಳಿದ್ದಾರೆ.
ಈಗ ಅಭಿವೃದ್ಧಿ ಕೆಲಸಗಳು ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಳೆ ಡಿವೈಎಫ್ಐ ನಡೆಸುವ ಮಾನವ ಸರಪಳಿ ಬಿಜೆಪಿಗಿರುವ ಒಂದು ಅಭಿನಂದನಾ ಸರಪಳಿಯಾಗಿ ಮಾರ್ಪಡಲಿದೆ ಯೆಂದೂ ಅವರು ಹೇಳಿದರು.
ಎನ್ಡಿಎ ಜಿಲ್ಲಾ ಸಂಚಾಲಕ ರವೀಶ ತಂತ್ರಿ ಕುಂಟಾರು ಅಧ್ಯಕ್ಷತೆ ವಹಿಸಿದರು. ಬಿಜೆಪಿ ನೇತಾರರಾದ ಎಂ. ಸಂಜೀವ ಶೆಟ್ಟಿ, ಕೆ. ರಂಜಿತ್, ಶಿವರಾಜ್, ಸವಿತಾ ಟೀಚರ್, ನ್ಯಾ. ಮನೋಜ್, ಸತೀಶ್ಚಂದ್ರ ಭಂಡಾರಿ, ನ್ಯಾ. ಎಂ. ನಾರಾಯಣ ಭಟ್, ವಿ. ರವೀಂದ್ರನ್, ಸುರೇಶ್ ಕುಮಾರ್ ಶೆಟ್ಟಿ, ಪೈಲಿ ಮಾತ್ಯಾಟ್, ಎನ್ಡಿಎ ಜಿಲ್ಲಾಧ್ಯಕ್ಷ ಗಣೇಶ್ ಪಾರೆಕಟ್ಟೆ, ಆರ್ಎಲ್ಜಿಪಿ ಜಿಲ್ಲಾಧ್ಯಕ್ಷ ರಾಮಕೃಷ್ಣನ್ ವಾಳನ್ನೂರಡಿ, ಕೇರಳ ರಾಮರಾಜ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂತೋಷ್ ಮೊದಲಾದವರು ಮಾತನಾಡಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಿನಯ್ ಕುಮಾರ್ ರೈ ಸ್ವಾಗತಿಸಿ, ಎ. ವೇಲಾಯುಧನ್ ವಂದಿಸಿದರು.