ಬಿಕೆಎಂಯುನಿಂದ ಜಿಲ್ಲೆಯ ವಿವಿಧ ವಿಲ್ಲೇಜ್ ಕಚೇರಿಗಳಿಗೆ ಮಾರ್ಚ್ ಧರಣಿ
ಕಾಸರಗೋಡು: ಕೃಷಿ ಕಾರ್ಮಿಕರಿಗೆ ಕ್ಷೇಮನಿಧಿ ಸೌಲಭ್ಯಗಳ ಬಾಕಿ ಉಳಿಸಿ ರುವ ಮೊತ್ತವನ್ನು ಕೂಡಲೇ ವಿತರಿ ಬೇಕು, ಕೃಷಿ ಕಾರ್ಮಿಕರ ಪಿಂಚಣಿ ಷರತ್ತು ರಹಿತವಾಗಿ ನೀಡಬೇಕು, ಕ್ಷೇಮನಿಧಿ ಸೌಲಭ್ಯಗಳನ್ನು ಹೆಚ್ಚಿಸ ಬೇಕು. ಉದ್ಯೋಗ ಖಾತರಿ ಯೋಜನೆ ಯನ್ನು ಬುಡಮೇಲುಗೊಳಿಸುವ ಕೇಂದ್ರ ಸರಕಾರದ ಯತ್ನ ಕೊನೆಗೊಳಿಸಬೇಕು, ಕಾರ್ಮಿಕರಿಗೆ ೭೦೦ ರೂ. ವೇತನ ನೀಡಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಬಿ.ಕೆ.ಎಂ.ಯು. ನೇತೃತ್ವದಲ್ಲಿ ಜಿಲ್ಲೆಯ ವಿವಿಧ ವಿಲ್ಲೇಜ್ ಕಚೇರಿಗಳಿಗೆ ಮಾರ್ಚ್, ಧರಣಿ ನಡೆಸಲಾಯಿತು.
ಹೊಸಬೆಟ್ಟು ವಿಲ್ಲೇಜ್ ಆಫೀಸ್ ಧರಣಿಯನ್ನು ಬಿಕೆಎಂಯು ಮಂಡಲ ಅಧ್ಯಕ್ಷ ಎಸ್. ರಾಮಚಂದ್ರ ಬಡಾಜೆ ಉದ್ಘಾಟಿಸಿದರು. ಸಿಪಿಐ ಮಂಜೇಶ್ವರ ಲೋಕಲ್ ಕಾರ್ಯದರ್ಶಿ ಶ್ರೀಧರ ಮಾಡ ಅಧ್ಯಕ್ಷತೆ ವಹಿಸಿದರು. ದಯಾಕರ ಮಾಡ ಸ್ವಾಗತಿಸಿ, ರಮೇಶ್ ಉದ್ಯಾವರ ವಂದಿಸಿದರು. ಮೀಂಜ ವಿಲ್ಲೇಜ್ ಆಫೀಸ್ ಧರಣಿಯನ್ನು ಬಿಕೆಎಂಯು ಮಂಡಲ ಕಾರ್ಯದರ್ಶಿ ಗಂಗಾಧರ ಕೊಡ್ಡೆ ಉದ್ಘಾಟಿಸಿದರು. ಸಿಪಿಐ ಹಿರಿಯ ಕಾರ್ಯಕರ್ತ ವಿಶ್ವ ನಾಥ ಶೆಟ್ಟಿ ಕುಳೂರು ಅಧ್ಯಕ್ಷತೆ ವಹಿಸಿದರು. ಶರತ್ ಬೆಜ್ಜ ಸ್ವಾಗತಿಸಿ, ವಂದಿಸಿದರು. ಉಪ್ಪಳ ವಿಲ್ಲೇಜ್ ಕಚೇರಿ ಧರಣಿಯನ್ನು ಸಿಪಿಐ ಮಂಜೇಶ್ವರ ಮಂಡಲ ಕಾರ್ಯದರ್ಶಿ ಜಯರಾಮ ಬಲ್ಲಂಗುಡೇಲ್ ಉದ್ಘಾಟಿಸಿದರು. ಸಿಪಿಐ ಉಪ್ಪಳ ಲೋಕಲ್ ಕಾರ್ಯದರ್ಶಿ ಹರೀಶ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ದಯಾನಂದ ಪಂಡಿತ್ ಸ್ವಾಗತಿಸಿ, ಫಾರೂಕ್ ಮುಸೋಡಿ ವಂದಿಸಿದರು. ವರ್ಕಾಡಿ ವಿಲ್ಲೇಜ್ ಕಚೇರಿ ಧರಣಿಯನ್ನು ಎಐಟಿಯುಸಿ ಮಂಜೇಶ್ವರ ಮಂಡಲ ಕಾರ್ಯದರ್ಶಿ ರಾಮಕೃಷ್ಣ ಕಡಂಬಾರು ಉದ್ಘಾಟಿಸಿದರು. ಪೂವಪ್ಪ ಕಲ್ಲೂರು ಅಧ್ಯಕ್ಷತೆ ವಹಿಸಿದರು. ಭುಜಂಗ ಸ್ವಾಗತಿಸಿ, ಲೋಕೇಶ್ ಪಾವಳ ವಂದಿಸಿದರು. ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದರು. ಇದರಂತೆ ಜಿಲ್ಲೆಯ ಇತರ ವಿಲ್ಲೇಜ್ ಕಚೇರಿಗಳಲ್ಲಿ ಧರಣಿ ನಡೆಸಲಾಗಿದೆ.