ಸ್ಕೂಟರ್‌ನಿಂದ ಎಂಡಿಎಂಎ ವಶ: ಪರಾರಿಯಾದ ಆರೋಪಿ ಸೆರೆ

ಉಪ್ಪಳ:  ಪೊಲೀಸರನ್ನು ಕಂಡು  ಉಪೇಕ್ಷಿಸಿದ ಸ್ಕೂಟರ್‌ನಿಂದ ಎಂಡಿಎಂಎ ವಶಪಡಿಸಿಕೊಂಡ ಪ್ರಕರಣದಲ್ಲಿ ಆರೋಪಿ ಸೆರೆಗೀಡಾ ಗಿದ್ದಾನೆ. ಉಪ್ಪಳ ಮೂಸೋಡಿಯ ಅಬ್ದುಲ್ ಮಜೀದ್ ಎಂಬಾತನನ್ನು ಮಂಜೇಶ್ವರ ಪೊಲೀಸರು ಬಂಧಿಸಿ ದ್ದಾರೆ.  ಆರೋಪಿಗೆ ನ್ಯಾಯಾಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ.  ಜನವರಿ ೮ರಂದು ರಾತ್ರಿ 8.15 ರ ವೇಳೆ  ಮಾದಕವಸ್ತು ವಶಪಡಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದ ಡಾನ್ಸಾಪ್ ಸ್ಕ್ವಾಡ್‌ನ ಸದಸ್ಯರಾದ ಆರಿಫ್, ಶೈಜು ಎಂಬಿವರು ಸೇರಿ ಮೂಸೋಡಿಯಲ್ಲಿ  ವಾಹನ ತಪಾಸಣೆ ನಡೆಸುತ್ತಿದ್ದಾಗ ಆಗಮಿಸಿದ ಸ್ಕೂಟರ್‌ಗೆ ತಡೆಯೊಡ್ಡಿದರು.  ಇದನ್ನು ಕಂಡು ಸ್ಥಳಕ್ಕೆ ತಲುಪಿದ ಓರ್ವ ಮಧ್ಯಪ್ರವೇಶಿಸಿದಾಗ ಮಜೀದ್ ಓಡಿ ಪರಾರಿಯಾಗಿದ್ದನು.  ಬಳಿಕ ನಡೆಸಿದ ತಪಾಸಣೆ ವೇಳೆ ಸ್ಕೂಟರ್‌ನಿಂದ ೧.೩೨ ಗ್ರಾಂ ಎಂಡಿಎಂಎ ವಶಪಡಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page