ಉಪ್ಪಳ: ಕೊಂಡೆವೂರು ನಿವಾಸಿ ಮಾಧವ ತುಳಸಿ ಅವರ ಪತ್ನಿ ಚಂದ್ರಿಕ (52) ನಿಧನ ಹೊಂದಿದರು. ಇವರು ಕಳೆದ ಹಲವು ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ಸಂಜೆ ಅಸೌಖ್ಯ ಉಲ್ಬಣಗೊಂಡು ಉಪ್ಪಳದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ನಿಧನ ಹೊಂದಿದರು. ಉಪ್ಪಳ ಶ್ರೀ ಭಗವತೀ ಕ್ಷೇತ್ರದ ಕೊಂಡೆವೂರು ಊರ್ಯೆ ಸಮಿತಿ ಮಹಿಳಾ ಸಂಘದ ಮಾಜಿ ಅಧ್ಯಕ್ಷೆಯಾಗಿದ್ದರು. ಮೃತರು ಪತಿ, ಮಕ್ಕಳಾದ ಸುಸ್ಮಿತಾ, ಸುಮಿತ, ಸುಶಾಂ ತ್, ಅಳಿಯಂದಿರಾದ ಶ್ರೀನಿವಾಸ, ಅಶ್ವಿನ್, ಸಹೋದರಿಯರಾದ ಪುಷ್ಪಾವತಿ, ಹೇಮಾವತಿ, ಮಾಲತಿ, ವಿಜಯ, ಸಹೋದರ ಅಶೋಕ ಹಾಗೂ ಅಪಾರ ಬಂಧು -ಬಳಗವನ್ನು ಅಗಲಿದ್ದಾರೆ. ತಂದೆ ರಾಘವ, ತಾಯಿ ರೇವತಿ ಈ ಹಿಂದೆ ನಿಧನರಾಗಿದ್ದಾರೆ. ನಿಧನಕ್ಕೆ ಉಪ್ಪಳ ಶ್ರೀ ಭಗವತಿ ಕ್ಷೇತ್ರ ಸೇವಾ ಸಮಿತಿ, ಶ್ರೀ ಭಗವತಿ ಯುವಜನ ಸಂಘ, ಶ್ರೀ ಭಗವತಿ ಮಹಿಳಾ ಸಂಘ ಸಂತಾಪ ವ್ಯಕ್ತಪಡಿಸಿದೆ.







