ಕಾಸರಗೋಡು: ನಕಲಿ ಸೌಂದ ರ್ಯವರ್ಧಕ ಸಾಮಾಗ್ರಿಗಳ ಪತ್ತೆಗಾಗಿ ರಾಜ್ಯ ಡ್ರಗ್ಸ್ ಕಂಟ್ರೋಲ್ ಇಲಾಖೆ ಪೊಲೀಸರ ಸಹಾಯದೊಂ ದಿಗೆ ಆಪರೇಶನ್ ಸೌಂದರ್ಯ ಎಂಬ ಹೆಸರಲ್ಲಿ ರಾಜ್ಯಾದ್ಯಂತ ವ್ಯಾಪಕ ಕಾರ್ಯಾಚರಣೆ ಆರಂಭಿಸಿದೆ. ಇದರಂತೆ ಈತನಕ ನಡೆಸಿದ ಕಾರ್ಯಾಚರಣೆಯಲ್ಲಿ ಎರಡು ಲಕ್ಷದಷ್ಟು ನಕಲಿ ಸೌಂದರ್ಯ ವರ್ಧಕ ಸಾಮಗ್ರಿಗಳನ್ನು ಪತ್ತೆಹಚ್ಚಿ ವಶಪಡಿಸಲಾಗಿದೆ. ಪಾಕಿಸ್ತಾನ ನಿರ್ಮಿತ ಎಂಬ ಹೆಸರು ನಮೂದಿಸಲಾಗಿದ್ದ ಗೋರಿ ಫೇಸ್ ಕ್ರೀಮ್ನ್ನು ಈ ಕಾರ್ಯಾ ಚರಣೆಯಲ್ಲಿ ಪತ್ತೆಹಚ್ಚಿ ವಶಪಡಿಸಲಾಗಿದೆ. ಈ ಫೇಸ್ ಕ್ರೀಮ್ನ ಪ್ಯಾಕೆಟ್ನ ಮೇಲೆ ಪುನಿಯಾ ಬ್ರದರ್ಸ್ ಪಾಕಿಸ್ತಾನ ಎಂಬ ಹೆಸರು ನಮೂದಿಸಲಾಗಿದೆ. ಇದರಲ್ಲಿ ಇತರ ಯಾವುದೇ ರೀತಿಯ ಮಾಹಿತಿಗಳನ್ನು ನಮೂದಿಸಲಾಗಿಲ್ಲ. ಇಂತಹ ಫೇಸ್ ಕ್ರೀಮ್ಗಳನ್ನು ಒಳಗೊಂಡ ಹಲವು ಪೆಟ್ಟಿಗೆಗಳನ್ನು ವಶಪಡಿಸಲಾಗಿದೆ. ಕಾಸರಗೋಡು, ಕಣ್ಣೂರು, ಪಾಲಕ್ಕಾಡ್, ತಿರುವನಂತಪುರ ಮತ್ತು ಮಲಪ್ಪುರಂ ಜಿಲ್ಲೆಗಳಿಂದ ಇಂತಹ ಫೇಸ್ ಕ್ರೀಮ್ಗಳನ್ನು ಪತ್ತೆಹಚ್ಚಲಾಗಿದೆ.
ಆದರೆ ಇಂತಹ ನಕಲಿ ಫೇಸ್ ಕ್ರೀಮ್ ಉಪಯೋಗಿಸಿದ ಪರಿಣಾಮ ಮಲಪ್ಪುರದ 17ರ ಹರೆಯದ ವಿದ್ಯಾರ್ಥಿನಿಯ ಕಿಡ್ನಿಗೆ ಹಾನಿಯುಂ ಟುಮಾಡಿದ ಎಫ್ ಟ್ಯೂನ್ ಎಂಬ ಹೆಸರಿನ ಫೇಸ್ ಕ್ರೀಮ್ ತಯಾರಕರನ್ನು ಪತ್ತೆಹಚ್ಚಲು ಡ್ರಗ್ಸ್ ಕಂಟ್ರೋಲ್ ಇಲಾಖೆಗೆ ಈತನಕ ಸಾಧ್ಯವಾಗಿಲ್ಲ. ಇವರ ಪತ್ತೆಗಾಗಿ ಕುಂಬಳೆ, ಮಲಪ್ಪುರ ಸೇರಿದಂತೆ ಹಲವೆಡೆ ದಾಳಿ ನಡೆಸಿದರೂ ಯಾವುದೇ ಪ್ರಯೋಜನ ಉಂಟಾಗಿಲ್ಲ.
ಅಂಗೀಕಾರ ಹೊಂದದ ಸೌಂದರ್ಯವರ್ಧಕ ಸಾಮಗ್ರಿಗಳನ್ನು ಮಾರಾಟ ಮಾಡುವ ಸಾಮಾಜಿಕ ಜಾಲತಾಣದ ಇಫ್ಲುವೆನ್ಸರ್ಗಳ ಮೇಲೆ ಪೊಲೀಸರು ಇನ್ನೊಂದೆಡೆ ತೀವ್ರ ನಿಗಾ ಇರಿಸಿದ್ದು ಅವರ ಬ್ಯಾಂಕ್ ಖಾತೆಗಳು ಮತ್ತು ಆನ್ಲೈನ್ ಫ್ಲಾಟ್ ಫಾಂಗಳನ್ನು ಪರಿಶೀಲಿಸಲಾಗುತ್ತಿದೆ. ಇಂತಹ ಹಲವು ಖಾತೆಗಳ ವ್ಯವಹಾರ ಗಳನ್ನು ಈಗ ಸ್ಥಗಿತಗೊಳಿಲಾಗಿದೆ. ಇಂತಹ ಬ್ಯಾಂಕ್ ಖಾತೆದಾರರ ಮಾಹಿತಿಗಳನ್ನು ಕೆಲವು ಬ್ಯಾಂಕ್ಗಳು ನೀಡಲು ಮುಂದಾಗದೆ ಇರುವುದರಿಂ ದಾಗಿ ಅದರ ಪತ್ತೆಗಾಗಿ ಈಗ ಸೈಬರ್ ವಿಭಾಗದಿಂದ ತನಿಖೆ ಆರಂಭಿಲಾಗಿದೆ.







