ಬದಿಯಡ್ಕ: ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಪಿಕಪ್ ಚಾಲಕ ಮೃತಪಟ್ಟರು. ಬದಿಯಡ್ಕ ಬಳಿಯ ಬೀಜಂತಡ್ಕದ ವಸಂತ ಟೈಲರ್ರ ಪುತ್ರ ಹರ್ಷಿತ್ ಯಾನೆ ಅಶೋಕ್ (36) ಎಂಬವರು ಮೃತಪಟ್ಟ ಯುವಕನಾಗಿ ದ್ದಾರೆ. ಇಂದು ಮುಂಜಾನೆ ಮನೆಯಲ್ಲಿ ನಿಧನ ಸಂಭವಿಸಿದೆ. ಅಲ್ಪಕಾಲದಿಂದ ಅಸೌಖ್ಯ ಬಾಧಿಸಿ ಚಿಕಿತ್ಸೆ ಪಡೆಯುತ್ತಿ ದ್ದರು. ಮೊದಲು ಬದಿಯಡ್ಕದಲ್ಲಿ ಆಟೋ ಚಾಲಕನಾಗಿದ್ದ ಹರ್ಷಿತ್ ಬಳಿಕ ಪಿಕಪ್ ಚಾಲಕನಾಗಿದ್ದರು. ಹರ್ಷಿತ್ರ ಅಕಾಲಿಕ ನಿಧನದಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿವೆ. ಗಣ್ಯರ ಸಹಿತ ಹಲವರು ಮನೆಗೆ ಬೇಟಿ ನೀಡಿ ಸಂತಾಪ ಸೂಚಿಸಿದರು. ಮೃತರು ತಂದೆ, ತಾಯಿ ಶಾರದ, ಪತ್ನಿ ಸುಶ್ಮಿತ, ಮಕ್ಕಳಾದ ಅನ್ಸಿತ್, ಅಸ್ಮಿತ್, ಸಹೋದರರಾದ ರೋಹಿತಾಕ್ಷ, ಗೌರೀಶ, ಅಜಿತ್, ಸಹೋದರಿ ಶಶಿಕಿರಣ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







