ಕಾಸರಗೋಡು: ಪತಿಯನ್ನು ಉಪೇಕ್ಷಿಸಿ ಬಂದರೆ ಮದುವೆ ಯಾಗುವುದಾಗಿ ಭರವಸೆಯೊಡ್ಡಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಂತೆ ಯುವಕನೋರ್ವ ಸೆರೆಗೀಡಾಗಿದ್ದಾನೆ. ಕಲ್ಲಿಕೋಟೆ ರಾಮನಾಟುಕರ ನಿವಾಸಿ ಮುಹ್ಸಿನ (35) ಎಂಬಾತ ಸೆರೆಗೀಡಾದ ಆರೋಪಿ. ಮದುವೆ ಯಾಗಿ ಪತಿಯ ಜೊತೆಗಿರುವ ಯುವತಿಯನ್ನು ಮುಹ್ಸಿನ ಇನ್ಸ್ಟಾಗ್ರಾಂನಲ್ಲಿ ಪರಿಚಯಗೊಂ ಡಿದ್ದನೆನ್ನಲಾಗಿದೆ. ಅನಂತರ ಪತಿಯನ್ನು ಉಪೇಕ್ಷಿಸಿ ಬಂದರೆ ನಿನ್ನನ್ನು ಮದುವೆಯಾಗಿ ಸೌದಿಗೆ ಕರೆದುಕೊಂಡು ಹೋಗುವು ದಾಗಿ ನಂಬಿಸಿ ಯುವತಿಗೆ ಆರೋಪಿ ಲೈಂಗಿಕ ಕಿರುಕುಳ ನೀಡಿರುವುದಾಗಿ ದೂರಲಾ ಗಿದೆ. ಇದರಂತೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಇದನ್ನು ತಿಳಿದ ಆರೋಪಿ ತಲೆಮರೆಸಿಕೊಂ ಡಿದ್ದನು. ಈ ಹಿನ್ನೆಲೆಯಲ್ಲಿ ಸಿಟಿ ಪೊಲೀಸ್ ಕಮಿಶನರ್ ಬಿ.ವಿ. ವಿಜಯ್ ಭರತ್ ರೆಡ್ಡಿಯವರ ನಿರ್ದೇಶ ಪ್ರಕಾರ ಎಸಿಪಿ ಎಂ.ಪಿ.ಆಜಾದ್ರ ಮೇಲ್ನೋಟದಲ್ಲಿ ನಡೆದ ತನಿಖೆ ವೇಳೆ ಆರೋಪಿಯನ್ನು ಮಲಪ್ಪುರಂ ಪಳ್ಳಿಕ್ಕಲ್ನಿಂದ ಸೆರೆಹಿಡಿಯಲಾಗಿದೆ.




