ಬದಿಯಡ್ಕ ವಾಹನ ಅಪಘಾತ: ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಯುವತಿ ಮೃತ್ಯು

ಬದಿಯಡ್ಕ: ಬದಿಯಡ್ಕ ಪೇಟೆಯಲ್ಲಿ ಆದಿತ್ಯವಾರ ರಾತ್ರಿ ಸ್ಕೂಟರ್‌ಗೆ ಕಾರು ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವತಿ ಮೃತಪಟ್ಟ ಘಟನೆ  ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ.

ಪೆರಡಾಲ ನವಜೀವನ ಶಾಲೆ ಸಮೀಪದ ನಿವಾಸಿಯಾದ ಪಿಗ್ಮಿ ಸಂಗ್ರಾಹಕ ರಾಜೇಶ್‌ರ ಪತ್ನಿ ವೀಣಾ (38) ಮೃತಪಟ್ಟ ದುರ್ದೈವಿ.  ಚೆಂಗಳದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಯಲ್ಲಿದ್ದ ಇವರು ನಿನ್ನೆ ಮಧ್ಯಾಹ್ನ ವೇಳೆ ಮೃತಪಟ್ಟರು. ಮೊನ್ನೆ ರಾತ್ರಿ ಬದಿಯಡ್ಕ ಮೇಲಿನ ಪೇಟೆಯಲ್ಲಿ ಅಪಘಾತ ಸಂಭವಿಸಿತ್ತು. ಬದಿಯಡ್ಕ ಬಳಿಯ ಬರ್ಲದಲ್ಲಿರುವ ತರವಾಡು ಮನೆಯಿಂದ ರಾಜೇಶ್, ಪತ್ನಿ ವೀಣಾ ಹಾಗೂ ಪುತ್ರಿ ರತನ್ಯ ಸ್ಕೂಟರ್‌ನಲ್ಲಿ ಪೆರಡಾಲ ಶಾಲೆ ಬಳಿಯಿರುವ ಸ್ವಂತ ಮನೆಗೆ ಬರುತ್ತಿದ್ದಾಗ   ಸ್ಕೂಟರ್‌ಗೆ ಕಾರು ಢಿಕ್ಕಿ ಹೊಡೆದಿತ್ತು.  ಅಪಘಾತದಲ್ಲಿ ಗಾಯಗೊಂಡ ಮೂವರನ್ನೂ ಚೆಂಗಳದ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಈ ಪೈಕಿ ವೀಣಾ ಗಂಭೀರ ಗಾಯಗೊಂಡಿದ್ದರು.  ರಾಜೇಶ್ ಹಾಗೂ ರತನ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ವೀಣಾರ ಮೃತದೇಹವನ್ನು ಇಂದು ಮಧ್ಯಾಹ್ನದೊಳಗೆ ಬದಿಯಡ್ಕ ಬರ್ಲದಲ್ಲಿರುವ ತರವಾಡು ಮನೆಗೆ ತಲುಪಿಸಿ ಬಳಿಕ ಅಂತ್ಯಸಂಸ್ಕಾರ ನಡೆಸಲಾಗುವುದೆಂದು ಸಂಬಂಧಿಕರು ತಿಳಿಸಿದ್ದಾರೆ.   ಮಂಗಳೂರು ಕದ್ರಿ ನಿವಾಸಿ ನಾರಾಯಣ-ಕಮಲ ದಂಪತಿ ಪುತ್ರಿಯಾದ ಮೃತ ವೀಣಾ ಪತಿ, ಪುತ್ರಿಯರಾದ ರತನ್ಯ, ತನುಶ್ರೀ, ಸಹೋದರ ನವೀನ, ಸಹೋದರಿ ನಮಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. 

You cannot copy contents of this page