ಯುವತಿಯಿಂದ 174 ಪವನ್ ಚಿನ್ನಾಭರಣ ಪಡೆದು ವಂಚಿಸಿದ ಬಗ್ಗೆ ದೂರು: ಪತಿಯ ಸಂಬಂಧಿಕನ ವಿರುದ್ಧ ಕೇಸು;

ಆರೋಪಿಗಾಗಿ ಶೋಧ

ಮಂಜೇಶ್ವರ:  ಸುಳ್ಳು ಹೇಳಿ ನಂಬಿಸಿ ಗೃಹಿಣಿಯಿಂದ 174 ಪವನ್ ಚಿನ್ನಾಭರಣವನ್ನು ಪಡೆದು ವ್ಯಕ್ತಿಯೋರ್ವ ವಂಚಿಸಿರುವುದಾಗಿ ದೂರಲಾಗಿದೆ. ಕಡಂಬಾರ್ ಕೆ.ಎ. ಸೋ ಮಿಲ್ ಸಮೀಪದ ೩೫ ವರ್ಷ ಪ್ರಾಯದ ಗೃಹಿಣಿ ನೀಡಿದ ದೂರಿನಂತೆ ದಕ್ಷಿಣಕನ್ನಡ ಜಿಲ್ಲೆಯ ಅಸೈಗೋಳಿ ನಿವಾಸಿ  ಮುಹಮ್ಮದ್ ನಿಸಾರ್ (35) ಎಂಬಾತನ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಆರೋಪಿಯು ದೂರುದಾತೆಯ ಪತಿಯ ಸಂಬಂಧಿಕನಾಗಿದ್ದಾನೆ ನ್ನಲಾಗಿದೆ. 2016ರಿಂದ 2016 ಅಕ್ಟೋಬರ್ 31ರ ವರೆಗಿನ ವಿವಿಧ ದಿನಗಳಲ್ಲಿ ದೂರುದಾತೆಯಿಂದ ಚಿನ್ನ ಪಡೆದುಕೊಂಡಿರುವುದಾಗಿ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ. ಹಲವು ರೀತಿಯ ಸುಳ್ಳುಗಳನ್ನು ಹೇಳಿ ಗೃಹಿಣಿ ಹಾಗೂ ಮನೆಯವರನ್ನು ನಂಬಿಸಿ ಚಿನ್ನಾಭರಣಗಳನ್ನು ಪಡೆದುಕೊಂಡಿ ರುವುದಾಗಿ ಹೇಳಲಾಗುತ್ತಿದೆ. ಆರೋಪಿಯನ್ನು ಪತ್ತೆಹಚ್ಚಲು ಮಂಜೇಶ್ವರ ಪೊಲೀಸ್ ಇನ್‌ಸ್ಪೆಕ್ಟರ್ ಎಂ.ವಿ. ವಿಷ್ಣುಪ್ರಸಾದ್ ನೇತೃತ್ವದಲ್ಲಿ ತನಿಖೆ ಆರಂಭಿಸಲಾಗಿದೆ.
 

You cannot copy contents of this page