ಕಾಸರಗೋಡು: ವಿಧಾನಸಭಾ ಚುನಾವಣೆಗೆ ಅಗತ್ಯವಾದ ಇಲೆಕ್ಟ್ರೋ ನಿಕ್ ಮತಯಂತ್ರಗಳು ಜಿಲ್ಲೆಯಲ್ಲಿ ಸಿದ್ಧವಾಗಿದೆ ಎಂದು ಜಿಲ್ಲಾ ಚುನಾ ವಣಾಧಿಕಾರಿ ಯಾಗಿರುವ ಜಿಲ್ಲಾಧಿಕಾರಿ ಕೆ. ಇಂಭಶೇಖರ್ ನುಡಿದರು. ವಿಧಾನ ಸಭಾ ಚುನಾವಣೆಗೆ ಅಗತ್ಯಕ್ಕಿರುವ ವಿದ್ಯುನ್ಮಾನ ಮತಯಂತ್ರಗಳ ಪ್ರಾಥಮಿಕ ತಪಾಸಣೆ ಜಿಲ್ಲೆಯಲ್ಲಿ ಪೂರ್ತಿಗೊಂಡಿದೆ. ಹೊಸತಾಗಿ ರೂಪೀಕರಿಸಿದ 158 ಬೂತ್ಗಳು ಸಹಿತ ಜಿಲ್ಲೆಯಲ್ಲಿ 1141 ಬೂತ್ಗಳು ಮುಂದಿನ ವಿಧಾನಸಭಾ ಚುನಾವಣೆಗಾಗಿ ಸಿದ್ಧವಾಗಿವೆ. ಮತದಾ ಕ್ಕಾಗಿ 1426 ಬ್ಯಾಲೆಟ್ ಘಟಕಗಳು, 1426 ಕಂಟ್ರೋಲ್ ಘಟಕಗಳು, 1536 ವಿವಿಪ್ಯಾಟ್ ಎಂಬಿವುಗಳ ಫಸ್ಟ್ ಲೆವೆಲ್ ಚೆಕ್ಕಿಂಗ್ ಪೂರ್ತಿಗೊಂಡಿದೆ. 14 ದಿನಗಳ ಕಾಲ ನಡೆದ ಪ್ರಾಥಮಿಕ ತಪಾಸಣೆ ಕೊನೆಗೊಂಡಿತು. ತಪಾಸಣೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರಾದ ಬಿಜು ಉಣ್ಣಿತ್ತಾನ್, ಕೆ. ಸುಕುಮಾರ್, ರಾಜೀವನ್ ನಂಬ್ಯಾರ್, ಇಮ್ಯಾನು ವೆಲ್ ಎಂಬಿವರು ಭಾಗವಹಿಸಿದರು. ಚುನಾವಣೆ ಡೆಪ್ಯುಟಿ ಕಲೆಕ್ಟರ್ ಎ.ಎನ್. ಗೋಪಕುಮಾರ್, ಎಫ್ಎಲ್ಸಿ ಸುಪರ್ವೈಸರ್ ಲಿಪು ಎಸ್. ಲಾರೆನ್ಸ್, ಜ್ಯೂನಿಯರ್ ಸುಪರಿಂಟೆಂಡೆಂಟ್ ಎ. ರಾಜೀವನ್, ಇ.ವಿ.ಎಂ. ನೋಡೆಲ್ ಆಫೀಸರ್ ಕೆ. ರಾಘವನ್ ಎಂಬಿವರು ಮೋಕ್ಪೋಲ್ಗೆ ನೇತೃತ್ವ ನೀಡಿದರು.







