ವಿಳಿಂಞ್ಞಂ ಬಂದರು ಎರಡನೇ ಹಂತದ ನಿರ್ಮಾಣಕ್ಕೆ ಇಂದು ಚಾಲನೆ

ತಿರುವನಂತಪುರ: ವಿಳಿಂಞ್ಞಂ ಬಂದರಿನ ಎರಡನೇ ಹಂತದ ನಿರ್ಮಾಣವನ್ನು ಇಂದು ಸಂಜೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸುವರು. ಕೇಂದ್ರ ಶಿಪ್ಪಿಂಗ್ ಖಾತೆ ಸಚಿವ ಸರ್ಬಾನಂದ ಸೋನೋವಾಲ್ ಮುಖ್ಯ ಅತಿಥಿಯಾಗಿರುವರು. 10 ಸಾವಿರ  ಕೋಟಿ ರೂಪಾಯಿಗಳ ನಿರ್ಮಾಣ ಚಟುವಟಿಕೆಗಳನ್ನು ಎರಡನೇ ಹಂತದಲ್ಲಿ ನಡೆಸಲಾಗುವುದು. ಇದರೊಂದಿಗೆ ಬಂದರಿನ   ಅಭಿವೃದ್ಧಿ ಪೂರ್ತಿಯಾಗಲಿದೆ. 2028ರಲ್ಲಿ ನಿರ್ಮಾಣ ಪೂರ್ತಿಗೊಳಿಸಲು ಉದ್ದೇಶಿಸಲಾಗಿದೆ. ರೈಲ್ವೇ ಯಾರ್ಡ್, ಮಲ್ಟಿ ಪರ್ಪಸ್ ಬರ್ತ್, ಲಿಕ್ವಿಡ್ ಟರ್ಮಿನಲ್, ಟ್ಯಾಂಕ್ ಫಾಮ್ ಎಂಬಿವುಗಳು ಕೂಡಾ ದ್ವಿತೀಯ ಹಂತದಲ್ಲಿ ನಡೆಯಲಿದೆ. ವಿಳಿಂಞ್ಞಂನಲ್ಲಿ ಈಗಾಗಲೇ 710 ಹಡಗುಗಳಿಂದಾಗಿ 15.19 ಲಕ್ಷ ಕಂಟೈನರ್‌ಗಳನ್ನು ತಲುಪಿಸಲಾಗಿದೆ. 2015 ಡಿಸೆಂಬರ್ 5ರಂದು ವಿಳಿಂಞ್ಞಂ ಬಂದರು ನಿರ್ಮಾಣದ ಮೊದಲ ಹಂತವನ್ನು ಆರಂಭಿಸಲಾ ಗಿತ್ತು. 2023 ಅಕ್ಟೋಬರ್ 15ರಂದು ವಿಳಿಂಞ್ಞಂ ಬಂದರಿಗೆ ಮೊದಲ ಹಡಗು ಚೀನಾದ ಸರಕು ಹಡಗಾದ ‘ಶೆನ್‌ಹುವ೧೫ಎ’ ತಲುಪಿತ್ತು.2024 ಜುಲೈ 12ರಂದು ಟ್ರಯಲ್ ರನ್ ಆರಂಭಿಸಲಾಯಿತು. ಅದರ ಬೆನ್ನಲ್ಲೇ ಸಾನ್ ಫರ್ನಾಂಡೋ ಎಂಬ ಹಡಗು ವಿಳಿಂಞ್ಞಂ ಗೆ ತಲು ಪಿದೆ. 2024 ಡಿಸೆಂಬರ್ 3ರಂದು ವ್ಯಾಪಾರ ಆಧಾರದಲ್ಲಿ ಬಂದರು ಚಟುವಟಿಕೆ ಆರಂಭಿಸಲಾಗಿದೆ.

You cannot copy contents of this page