ಪ್ರಶ್ನೆಗೆ ಸೂಕ್ತ ಉತ್ತರವಿಲ್ಲ: 15 ಪವನ್ ಚಿನ್ನಾಭರಣ ಸಹಿತ 63ರ ಹರೆಯದ ವ್ಯಕ್ತಿ ರೈಲು ನಿಲ್ದಾಣದಲ್ಲಿ ಸೆರೆ

ಕಾಸರಗೋಡು: ಸಾಕಷ್ಟು ದಾಖಲೆಗಳಿಲ್ಲದೆ 15 ಪವನ್ ಚಿನ್ನಾಭರಣಗಳ ಸಹಿತ 63ರ ಹರೆಯದ ವ್ಯಕ್ತಿಯನ್ನು ಕಾಸರಗೋಡು ರೈಲ್ವೇ ನಿಲ್ದಾಣದಲ್ಲಿ ಸೆರೆ ಹಿಡಿಯಲಾಗಿದೆ. ಹರಿಯಾಣ ಬೋಟೋಲ್ ನಿವಾಸಿ ದಿಲ್‌ಬಾಗ್ (63)ನನ್ನು ರೈಲ್ವೇ ಪೊಲೀಸರು ಸೆರೆ ಹಿಡಿದಿದ್ದಾರೆ. ಶನಿವಾರ ಮಧ್ಯಾಹ್ನ ಎಸ್‌ಐ ಸಿ.ಎಸ್. ಸುನಿಲ್ ಕುಮಾರ್ ಹಾಗೂ ತಂಡ ರೈಲು ನಿಲ್ದಾಣದಲ್ಲಿ ತಪಾಸಣೆ ನಡೆಸಿದ್ದರು. ಈ ಮಧ್ಯೆ ಫ್ಲಾಟ್‌ಫಾಮ್‌ನಲ್ಲಿ ಸಂಶಯಾಸ್ಪದವಾದ ಸನ್ನಿವೇಷದಲ್ಲಿ ಓರ್ವನನ್ನು ಪತ್ತೆಹಚ್ಚಲಾಗಿದೆ. ಪ್ರಶ್ನಿಸಿದಾಗ ಸ್ಪಷ್ಟ ಉತ್ತರ ಲಭಿಸದ ಹಿನ್ನೆಲೆಯಲ್ಲಿ ಈತನ ಬ್ಯಾಗ್‌ಗಳನ್ನು ಪರಿಶೀಲಿಸಿದಾಗ ಅದರಲ್ಲಿ ೧೫ ಪವನ್‌ನಷ್ಟು ಚಿನ್ನಾಭರಣಗಳನ್ನು ಪತ್ತೆಹಚ್ಚಲಾಗಿದೆ. ಈ ಚಿನ್ನಾಭರಣಗಳು ಎಲ್ಲಿಂದ ಲಭಿಸಿತು ಎಂಬ ವಿಷಯದಲ್ಲಿ ಸೂಕ್ತ ಉತ್ತರ ಲಭಿಸಿರಲಿಲ್ಲ.

ಈ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಯಲ್ಲಿ ಶೊರ್ನೂರು, ಕಲ್ಲಿಕೋಟೆ ರೈಲ್ವೇ ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಕಳವು ಪ್ರಕರಣಗಳು ಜ್ಯಾರಿಯಲ್ಲಿದೆ ಎಂದು ಪತ್ತೆಹಚ್ಚಲಾಯಿತು. ನ್ಯಾಯಾಲ ಯದಲ್ಲಿ ಹಾಜರುಗೊಳಿಸಿದ ಆರೋಪಿಗೆ ೧೪ ದಿನದ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಎಎಸ್‌ಐ ಗಂಗಾಧರನ್, ಸಿವಿಲ್ ಪೊಲೀಸ್ ಆಫೀಸರ್ ಸನೂಪ್, ಆರ್‌ಪಿಎಫ್ ಕಾನ್‌ಸ್ಟೇಬಲ್ ರಾಜೇಶ್ ಎಂಬಿವರು ಸೇರಿ ಆರೋಪಿಯನ್ನು ಸೆರೆ ಹಿಡಿದಿದ್ದಾರೆ.

RELATED NEWS

You cannot copy contents of this page