ಹೊಸದುರ್ಗ: 1 ಲಕ್ಷ ಸ್ಕ್ವಾರ್ ಫೀಟ್‌ನಲ್ಲಿ ಉತ್ತರಕೇರಳದ ಅತ್ಯಂತ ದೊಡ್ಡ ಬ್ರೈಡಲ್ ಫ್ಯಾಶನ್ ಶೋರೂಂ ಆದ ಸೆಂಚುರಿ ವೆಡ್ಡಿಂಗ್ ಸೆಂಟರ್ ಕಾಞಂಗಾಡ್‌ನಲ್ಲಿ ನಾಳೆ ಚಟುವಟಿಕೆ ಆರಂಭಿಸಲಿದೆ. ನಾಲ್ಕು ದಶಕಗಳಿ ಗಿಂತಲೂ ಹೆಚ್ಚಾಗಿ ಫ್ಯಾಶನ್ ರಂಗದಲ್ಲಿ ಅನುಭವ ಸಂಪತ್ತು, ಪರಂಪರೆ, ವಿಶ್ವಾಸ ವಾಗಿದೆ ಉತ್ತರಕೇರಳದ ಅತ್ಯಂತ ದೊಡ್ಡ ಬ್ರೈಡಲ್ ಶೋರೂಂ ಕಾಞಂಗಾಡ್‌ನಲ್ಲಿ ಆರಂಭಿಸಲು ಸೆಂಚುರಿಗೆ ಪ್ರೇರಣ ಶಕ್ತಿಯಾಗಿರುವುದು. ಎಲ್ಲಾ ವಿಧದ ಬ್ರೈಡಲ್ ಫ್ಯಾಶನ್‌ಗಳು, ವೆಡ್ಡಿಂಗ್ ಸಾರಿಗಳು, ಲೆಹಂಗಗಳು ಎಂಬಿವುಗಳ ನೂತನ ಸಂಗ್ರಹ, ಅಲ್ಲದೆ ಪ್ರತ್ಯೇಕ ಸೆಕ್ಷನ್ ಇಲ್ಲಿ ಸಿದ್ಧಪಡಿಸಲಾ ಗಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಸಂಸ್ಥೆಯ ಉದ್ಘಾಟನೆಯನ್ನು ಕಾಞಂಗಾಡ್ ನಗರಸಭಾ ಅಧ್ಯಕ್ಷ ವಿ.ವಿ. ರಮೇಶ್ ನಿರ್ವಹಿಸುವರು. ಕಾಸರಗೋಡು ನಗರಸಭಾ ಅಧ್ಯಕ್ಷೆ ಶಾಹಿನಾ ಸಲೀಂ ಬ್ರೈಡಲ್ ಸೆಕ್ಷನ್ ಉದ್ಘಾಟನೆ ನೆರವೇರಿಸುವರು. ಜಂಟ್ಸ್ ಸೆಕ್ಷನ್‌ನ್ನು ಭಾರತದ ಕಾಲ್ಚೆಂಡು ಪಟು ಮೊಹಮ್ಮದ್ ರಾಫಿ ನಿರ್ವಹಿಸುವರು. ಸಾರಿ ಸೆಕ್ಷನ್‌ನ್ನು ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಸ್ಯ ಮೇಚೇರಿ ನಿರ್ವಹಿಸುವರು. ಮಕ್ಕಳ ವಿಭಾಗವನ್ನು ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಕಾಸರಗೋಡು ಜಿಲ್ಲಾಧ್ಯಕ್ಷ ಅಹಮ್ಮದ್ ಶರೀಫ್ ನಿರ್ವಹಿಸುವರು. ಫ್ಯಾನ್ಸಿ ಮತ್ತು ಫೂಟ್‌ವೇರ್ ಸೆಕ್ಷನ್‌ನ್ನು ಕಾಞಂಗಾಡ್ ಮರ್ಚೆಂಟ್ಸ್ ಅಸೋಸಿಯೇ ಶನ್ ಅಧ್ಯಕ್ಷ ಅಸೀಫ್ ನಿರ್ವಹಿಸುವರು.
5೦೦ರಷ್ಟು ವಾಹನಗಳಿಗೆ ನಿಲುಗಡೆ ಸೌಕರ್ಯವನ್ನು ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಪಾರ್ಟ್ನರ್‌ಗಳಾದ ಪಿ. ಅಶ್ರಫ್ ಹಾಜಿ, ಪಿ. ಸಿದ್ದಿಕ್, ಪಿ. ಇಬ್ರಾಹಿಂ, ಪಿ. ಅಬ್ದುಲ್ ನಾಸರ್, ಪಿ. ಫಿರೋಸ್, ಪಿ. ಫಸಲ್, ಪಿ. ಅಬ್ದುಲ್ ರಶೀದ್, ಕೆ.ಟಿ. ಸಲಾಂ, ಪಿ. ರಾಶಿಕ್, ಮುಹಮ್ಮದ್ ಶೈಲಾಜ್, ಪರಾಸ್ ಮುಹಮ್ಮದ್, ಶಾಹಿಫ್ ಸಿದ್ದಿಕ್, ಅಬ್ದುಲ್ ಹಮೀದ್, ಸಿನಾಸ್ ನಾಸರ್ ಎಂಬಿವರು ತಿಳಿಸಿದ್ದಾರೆ. ಕಣ್ಣೂರು, ತಳಿಪರಂಬ್, ಪಯ್ಯನ್ನೂರು, ಶ್ರೀಕಂಠ ಪುರ, ಇರಿಟ್ಟಿ, ತಲಶ್ಶೇರಿ, ಮಾನಂತ ವಾಡಿ, ಸುಲ್ತಾನ್‌ಬತ್ತೇರಿಗಳಲ್ಲೂ ಶೋರೂಂ ಕಾರ್ಯಾಚರಿಸುತ್ತಿದೆ.







