ಬೀದಿನಾಯಿಗಳ ಉಪಟಳಕ್ಕೆ ಕಠಿಣ ಕ್ರಮ- ಬದಿಯಡ್ಕ ಪಂ. ಅಧ್ಯಕ್ಷ

ಬದಿಯಡ್ಕ: ಬೀದಿನಾಯಿಗಳ ಕಾಟವನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಬದಿಯಡ್ಕ ಪಂಚಾಯತ್ ಅಧ್ಯಕ್ಷ ಶಂಕರ ಡಿ. ತಿಳಿಸಿದ್ದಾರೆ. ವಿವಿಧ ವಾರ್ಡ್‌ಗಳ ಸದಸ್ಯರಿಂದ ಮಾಹಿತಿ ಪಡೆದುಕೊಂಡು ಅವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳು ವುದಕ್ಕೆ ಸೂಚಿಸಿದರು. ಕುಂಟಿಕಾನ ಚೆನ್ನೆಗುಳಿಯಲ್ಲಿ ಬೀದಿನಾಯಿಗಳ ಆಕ್ರಮಣದಿಂದ, ಶಾಲಾ ಮಕ್ಕಳು, ಜನರು ಭಯಭೀತರಾಗಿದ್ದರು. ಈ ಹಿನ್ನೆಲೆಯಲ್ಲಿ ಚೆನ್ನೆಗುಳಿಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿ, ಸಾಕುನಾಯಿಗಳನ್ನು ಕಟ್ಟಿಹಾಕುವಂತೆ ಜನರಲ್ಲಿ ಮನವಿ ಮಾಡಿದರು. ವಾರ್ಡ್ ಪ್ರತಿನಿಧಿ ಅನ್ನತ್ ಬೀವಿ, ಪೊಲೀಸ್ ಅಧಿಕಾರಿಗಳು, ಸ್ಥಳೀಯರು ಉಪಸ್ಥಿತರಿದ್ದರು.

You cannot copy contents of this page