ಕುಂಬ್ಡಾಜೆ?:ಪಂಚಾಯತ್ ಮತ್ತು ಕುಟುಂಬ ಆರೋಗ್ಯ ಕೇಂದ್ರದಲ್ಲಿ ಆರು ಗುರಿಗಳನ್ನು ಸಾಧಿಸುವ ಮಿಷನ್ ೨೦೨೬ಕ್ಕೆ ಚಾಲನೆ ನೀಡಲಾಯಿತು. ಕುಂಬ್ಡಾಜೆ ಪಂಚಾಯತ್ ವ್ಯಾಪ್ತಿ ಯಲ್ಲಿರುವ ಏಳು ಶಾಲಾ ಆವರಣಗಳನ್ನು ತಂಬಾಕುಮುಕ್ತಗೊಳಿಸಲಾಗುವುದು, ಪಾಲಿಯೇಟಿವ್ ಕೇರ್ ಪಡೆಯುವ ರೋಗಿಗಳು ಮತ್ತು ನಿರ್ಗತಿಕ ರೋಗಿಗಳಿಗೆ ಸಾಂತ್ವನ ನೀಡಲು ಜನರ ಸಹಾಯ ಸಮಿತಿ ರಚಿಸಲಾಗುವುದು, ಮಲೇರಿಯ ತಡೆಗಟ್ಟುವ ಚಟುವಟಿಕೆಗಳಿಗಾಗಿ 14 ವಾರ್ಡ್‌ಗಳಲ್ಲಿ ಆರೋಗ್ಯ ಸ್ವಯಂ ಸೇವಕರನ್ನು ಆಯ್ಕೆ ಮಾಡಲಾಗುವುದು. ಕುಂಬ್ಡಾಜೆ ಪಂಚಾಯತ್‌ನ್ನು ಕ್ಷಯಮುಕ್ತ ಪಂಚಾಯತ್ ಮಾಡಲಾಗುವುದು, ಮೊದಲಾದ ಕಾರ್ಯಗಳಿಗೆ ಗುರಿ ಇರಿಸಲಾಗಿದೆ. ಈ ಕುರಿತು ಕುಂಬ್ಡಾಜೆ ಪಂಚಾಯತ್ ಸಭಾಂಗಣದಲ್ಲಿ ಜರಗಿದ ಜನಪ್ರತಿನಿಧಿಗಳು ಮತ್ತು ಕುಟುಂಬ ಆರೋಗ್ಯ ಕೇಂದ್ರದ ಸಿಬ್ಬಂದಿಗಳ ಸಭೆಯಲ್ಲಿ ಕುಟುಂಬ ಆರೋಗ್ಯ ಸಮೀಕ್ಷೆ ನಡೆಸಲು ತೀರ್ಮಾನಿಸಲಾಯಿತು. ಪಂ. ಉಪಾಧ್ಯಕ್ಷ ರವೀಂದ್ರ ರೈ ಗೋಸಾಡ ಅಧ್ಯಕ್ಷತೆ ವಹಿಸಿದರು. ಅಧ್ಯಕ್ಷೆ ಯಶೋಧ ಉದ್ಘಾಟಿಸಿದರು. ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರಿಯಾಂಕ ಎ.ಸಿ, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ನಯನ ಕನಕಜೆ, ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಅಬೂಬಕ್ಕರ್, ಸದಸ್ಯರಾದ ಮಹೇಶ್ ಎ, ನೂರುದ್ದೀನ್ ಪಿ, ಸೌಭಾಗ್ಯಲಕ್ಷ್ಮಿ ಕೆ, ಗೀತಾ ಡಿ, ಎಸ್. ಮೊಹಮ್ಮದ್ ಕುಂಞಿ, ಕೊರಗಪ್ಪ ಜಿ, ಬಬಿತ ರೇಷ್ಮ, ಬಿ.ಟಿ. ಅಬ್ದುಲ್ಲ ಕುಂಞಿ ಮಾತನಾಡಿದರು.
ಕುಟುಂಬ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಭಾಗವಹಿಸಿದರು. ಡಾ. ಸಯ್ಯದ್ ಹಮೀದ್ ಶುಹೈಬ್ ಮತ್ತು ಆರೋಗ್ಯ ನಿರೀಕ್ಷಕ ಕೆ. ಸುರೇಶ್ ಕುಮಾರ್ ಯೋಜನೆಯ ಗುರಿ ಮತ್ತು ಮಹತ್ವದ ಬಗ್ಗೆ ವಿವರಿಸಿದರು. ಆಶಾ ಕಾರ್ಯಕರ್ತೆ ಲಕ್ಷ್ಮಿ ಎನ್. ವಂದಿಸಿದರು.







