ಕಾಸರಗೋಡು: ಕಾಸರಗೋಡು ಎಕ್ಸೈಸ್ ಎನ್ಫೋರ್ಸ್ಮೆಂಟ್ ಆಂಡ್ ಆಂಟಿ ನಾರ್ಕೋಟಿಕ್ಸ್ ಸ್ಪೆಷಲ್ ಸ್ಕ್ವಾಡ್ನ ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ನೇತೃತ್ವದ ಅಬಕಾರಿ ತಂಡ ಪೆರಿಯ ತಾನ್ನೋಟ್ ಕಲಾಂನಗರದ ವಸತಿಗೃಹವೊಂದಕ್ಕೆ ನಡೆಸಿದ ದಾಳಿಯಲ್ಲಿ ಮಾದಕದ್ರವ್ಯ ವಾದ 75.11 ಗ್ರಾಂ ಎಂಡಿಎಂಎ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಕೊಳತ್ತೂರು ಗ್ರಾಮದ ಮಂಜನಡ್ಕ ನಿವಾಸಿ ಅಬ್ದುಲ್ ಶರೀಫ್ ಕೆ ನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಎಕ್ಸೈಸ್ ಇನ್ಸ್ಪೆಕ್ಟರ್ ವಿಷ್ಣುಪ್ರಕಾಶ್, ಅಸಿ. ಎಕ್ಸೈಸ್ ಇನ್ಸ್ಪೆಕ್ಟರ್ ಸಿಕೆವಿ ಸುರೇಶ್ ಮತ್ತು ಇತರ ಸಿಬ್ಬಂದಿಗಳಾದ ರಾಜೇಶ್ ಪಿ, ಅತುಲ್ ಟಿ.ವಿ, ಚಾಲಕ ಕ್ರಿಸ್ಟಿನ್ ಪಿ.ಎ ಎಂಬಿವರು ಒಳಗೊಂಡಿದ್ದರು.






