ನಾಪತ್ತೆಯಾದ ಯುವಕ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ನಾಪತ್ತೆಯಾದ ಯುವಕ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.  ಕಾಸರಗೋಡು ನೆಲ್ಲಿಕುಂಜೆ ಚೀರುಂಬಾ ರಸ್ತೆ ಬಳಿ ನಿವಾಸಿ  ದಿ| ಕುಮಾರನ್-ಸುಗಂಧಿ ದಂಪತಿ ಪುತ್ರ ಇಂಟೀರಿಯರ್ ಡೆಕೋರೇಟರ್ ಕಾರ್ಮಿಕ ರತೀಶ್ (39) ಸಾವನ್ನಪ್ಪಿದ ವ್ಯಕ್ತಿ. ಇವರು ನಿನ್ನೆ ಬೆಳಿಗ್ಗೆ ನಾಪತ್ತೆಯಾಗಿದ್ದರು. ಇವರಿಗಾಗಿ ಮನೆಯವರು ಹುಡುಕಾಟ ಆರಂಭಿಸಿದಾಗ ಕಾಸರಗೋಡು ಹಾರ್ಬರ್ ಸಮೀಪದ ಗಾಳಿಮರದಲ್ಲಿ  ಇಂದು ಬೆಳಿಗ್ಗೆ  ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕಾಸರಗೋಡು ಪೊಲೀಸರು  ಈ ಬಗ್ಗೆ ತನಿಖೆ ನಡೆಸಿ ಮೃತದೇಹವನ್ನು  ಜನರಲ್ ಆಸ್ಪತ್ರೆಗೆ ಸಾಗಿಸಿದರು.

ಮೃತರು ಪತ್ನಿ ಅಂಜು, ಮಗ ಆರವ್, ಸಹೋದರ ಸಹೋದರಿಯರಾದ ರಾಜೇಶ್, ರಮೇಶ್, ರಾಕೇಶ್, ಸಿಂಧು, ಬಿಂದು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page