ಹೊಸದುರ್ಗ: ಕೆಎಸ್ಆರ್ಟಿಸಿ ಬಸ್ನ ಮುಂಭಾಗದಲ್ಲಿ ಅಪಾಯಕರ ವಾದ ರೀತಿಯಲ್ಲಿ ಕಾರು ಚಲಾಯಿಸಿದ ಘಟನೆಯಲ್ಲಿ ಮೋಟಾರುವಾಹನ ಇಲಾಖೆ ಚಾಲಕನ ಲೈಸನ್ಸ್ ರದ್ದು ಗೊಳಿಸಲು ಶಿಫಾರಸು ಮಾಡಿದೆ. ಚೆರುವತ್ತೂರು ನಿವಾಸಿ ಶಾಹಿದ್ ಶಾಹುಲ್ ವಿರುದ್ಧ ಮೋಟಾರು ವಾಹನ ಇಲಾಖೆ ಈ ಕ್ರಮ ಕೈಗೊಂಡಿದೆ. ಮಲಪ್ಪುರಂ ಎಡಪ್ಪಾಲ್ನ ಚಾಲನಾ ತರಬೇತಿ ಕೇಂದ್ರದಲ್ಲಿ ಐದು ದಿನದ ಕಡ್ಡಾಯ ತರಬೇತಿಗೂ, ನ್ಯಾಯಾಲಯ ದಲ್ಲಿ ದಂಡ ಪಾವತಿಸಲು ಮೋಟಾರು ವಾಹನ ಇಲಾಖೆ ಶಿಫಾರಸು ಮಾಡಿದೆ.
ಕೆಎಸ್ಆರ್ಟಿಸಿ ನೀಡಿದ ದೂರಿನಂತೆ ಈ ಕ್ರಮ ಕೈಗೊಳ್ಳಲಾಗಿದೆ. ಕಾಞಂಗಾಡ್ ಅಸಿಸ್ಟೆಂಟ್ ಮೋಟಾರು ವೆಹಿಕಲ್ ಇನ್ಸ್ಪೆಕ್ಟರ್ಗಳಾದ ಪ್ರವೀಣ್ ಕುಮಾರ್, ಕೆ. ಅಭಿಲಾಷ್ ಎಂಬಿವರು ಚಾಲಕನನ್ನು ಪತ್ತೆಹಚ್ಚಿ ಕ್ರಮಕ್ಕೆ ಸೂಚಿಸಿದ್ದಾರೆ. ಕೆಎಸ್ಆರ್ಟಿಸಿ ಸೂಪರ್ ಫಾಸ್ ಬಸ್ನ ಮುಂಭಾಗದಲ್ಲಿ ಇತ್ತೀಚೆಗೆ ಅಪಾಯಕರವಾದ ರೀತಿಯಲ್ಲಿ ಕಾರು ಚಲಾಯಿಸಿದ ಬಗ್ಗೆ ದೂರಲಾಗಿತ್ತು.







