23.4 ಲೀಟರ್ ಕರ್ನಾಟಕ ಮದ್ಯ ಸಹಿತ ಓರ್ವ ಸೆರೆ

ಕುಂಬಳೆ:  ಕರ್ನಾಟಕ ನಿರ್ಮಿತ ವಿದೇಶ ಮದ್ಯ ಕೈವಶವಿರಿಸಿಕೊಂಡಿದ್ದ ಓರ್ವನನ್ನು ಅಬಕಾರಿ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಮಂಗಲ್ಪಾಡಿ ಅಡ್ಕ ಭಗವತಿ ನಗರ ನಿವಾಸಿ ಹರೀಶ್ ಎ. (36) ಎಂಬಾತನನ್ನು ಕುಂಬಳೆ ಅಬಕಾರಿ ರೇಂಜ್ ಪ್ರಿವೆಂಟಿವ್ ಆಫೀಸರ್ ಜಿಜಿನ್ ಎಂ.ವಿ. ನೇತೃತ್ವದ ತಂಡ ಬಂಧಿಸಿದೆ. ಬಂಧಿತನ ಕೈಯಿಂದ 23.4 ಲೀಟರ್ ಕರ್ನಾಟಕ ಮದ್ಯ ವಶಪಡಿಸಲಾಗಿದೆ. ಅಡ್ಕ ಅಂಗನವಾಡಿ ಸಮೀಪದಿಂದ 180 ಮಿಲ್ಲಿಯ 130 ಟೆಟ್ರಾಪ್ಯಾಕೆಟ್ ಮದ್ಯ ಸಹಿತ ಈತನನ್ನು ಬಂಧಿಸಲಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಪ್ರಿವೆಂಟಿವ್ ಆಫೀಸರ್‌ಗಳಾದ ಮೊಯ್ದೀನ್ ಸಾದಿಕ್, ಕಬೀರ್, ಸಿವಿಲ್ ಎಕ್ಸೈಸ್ ಆಫೀಸರ್ ಅವಿನಾಶ್ ಎಂಬಿವರಿದ್ದರು.

You cannot copy contents of this page