ರಾ. ಹೆದ್ದಾರಿ ಕುಂಬಳೆಯಲ್ಲಿ ಟೋಲ್ ಬೂತ್ ರದ್ದು: ಬಿಜೆಪಿ, ಕ್ರಿಯಾ ಸಮಿತಿಯಿಂದ ಹರ್ಷ ಮೆರವಣಿಗೆ

ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಆರಿಕ್ಕಾಡಿಯಲ್ಲಿ ಆರಂಭಿಸಲಾ ಗಿದ್ದ ಟೋಲ್ ಬೂತ್‌ನ ಚಟುವಟಿಕೆ ಯನ್ನು ಕೇಂದ್ರ ಸರಕಾರ ನಿಲುಗಡೆಗೊಳಿ ಸಿದೆ. ಈ ಬಗ್ಗೆ ಕೇಂದ್ರ ಸರಕಾರದ ಮಾಹಿತಿ ಲಭಿಸಿರುವು ದಾಗಿ ಬಿಜೆಪಿ ನೇತಾರರಾದ ಎಂ.ಎಲ್. ಅಶ್ವಿನಿ ಹಾಗೂ ಕೆ. ಸುರೇಂದ್ರನ್ ತಿಳಿಸಿದ್ದಾರೆ. ಟೋಲ್ ಪ್ಲಾಜಾದ ವಿರುದ್ಧ ವ್ಯಾಪಕ ಪ್ರತಿಭಟನೆ ಹುಟ್ಟಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ನಿರಂತರ ಮಧ್ಯಪ್ರವೇಶಿಸಿ, ಸಂಬಂಧ ಪಟ್ಟವರಿಗೆಲ್ಲಾ ಹಲವು ಬಾರಿ ಮನವಿ ಸಲ್ಲಿಸಿ ಟೋಲ್ ಸಂಗ್ರಹ ನಿಲುಗಡೆ ಗೊಳಿಸಬೇಕೆಂದು ಒತ್ತಾಯಿಸಿತ್ತು. ಜಿಲ್ಲಾ ಸಮಿತಿಯ ಮನವಿಗೆ ಸ್ಪಂದಿಸಿ ರಾಜ್ಯ ಅಧ್ಯಕ್ಷರು ಪ್ರಧಾನಮಂತ್ರಿ ಸಹಿತ ಕೇಂದ್ರ ಸರಕಾರದ ಗಮನಕ್ಕೆ ತಂದಿದ್ದುದಾಗಿ ಎಂ.ಎಲ್. ಅಶ್ವಿನಿ ತಿಳಿಸಿದ್ದಾರೆ.

ಟೋಲ್ ಬೂತ್ ನಿಲುಗಡೆಗೊಳಿ ಸಿದ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಕ್ರಿಯಾಸಮಿತಿ ನೇತೃತ್ವದಲ್ಲಿ ನಿನ್ನೆ ರಾತ್ರಿ ಕುಂಬಳೆಯಲ್ಲಿ ಹರ್ಷ ಮೆರವಣಿಗೆ ನಡೆಸಲಾಯಿತು. ಬಿಜೆಪಿ ನೇತೃತ್ವದಲ್ಲಿ ಮೊದಲು ಹರ್ಷ ಮೆರವಣಿಗೆ ನಡೆದಿದೆ. ಮೆರವಣಿಗೆಗೆ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ, ನೇತಾರರಾದ ಸುನಿಲ್ ಕುಮಾರ್,ಸುಜಿತ್ ರೈ, ಮುರಳೀಧರ ಯಾದವ್, ಸುಧಾಕರ ಕಾಮತ್, ವಿಕ್ರಂ ಪೈ, ರಮೇಶ್ ಭಟ್ ನೇತೃತ್ವ ನೀಡಿದರು. ಟೋಲ್ ಬೂತ್ ನಿಲುಗಡೆಗೊಳಿಸಿದ ಕ್ರಮಕ್ಕೆ  ಪ್ರಧಾನಮಂತ್ರಿ ನರೇಂದ್ರಮೋದಿ, ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಎಂಬವರಿಗೆ ಅಭಿನಂದನೆ ಸಲ್ಲಿಸಲಾಯಿತು.

ಟೋಲ್ ಬೂತ್ ಆರಂಭಿಸಲು ಪ್ರಯತ್ನ ಆರಂಭಗೊಂಡಲ್ಲಿಂದ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಮೂಲಕ ಪ್ರಧಾನಮಂತ್ರಿ ಹಾಗೂ ಸಚಿವ ನಿತಿನ್ ಗಡ್ಕರಿಯನ್ನು ಭೇಟಿಯಾಗಿ ಮನವಿ ಸಲ್ಲಿಸಿ ನಿರಂತರ ಚರ್ಚೆ ನಡೆಸಿರುವುದಾಗಿ ಎಂ.ಎಲ್. ಅಶ್ವಿನಿ ತಿಳಿಸಿದ್ದಾರೆ. ಇದೇ ವೇಳೆ ಶಾಸಕ ಈ ವಿಷಯದಲ್ಲಿ ರಾಜ ಕೀಯ ಲಾಭ ಪಡೆಯಲು ಪ್ರಯತ್ನಿಸಿ ದ್ದಾರೆಂದೂ ಅಶ್ವಿನಿ ಆರೋಪಿಸಿದ್ದಾರೆ.

ಇದೇ ವೇಳೆ ಟೋಲ್ ಸಂಗ್ರಹ ನಿಲುಗಡೆಗೊಳಿಸಲು  ಕೈಗೊಂಡ ನಿರ್ಧಾರ ಕ್ರಿಯಾ ಸಮಿತಿ ನಿರಂತರವಾಗಿ ನಡೆಸಿದ ಚಳವಳಿ ಹಾಗೂ ಕಾನೂನುಕ್ರಮಗಳಿಗೆ  ಲಭಿಸಿದ ವಿಜಯವಾಗಿದೆಯೆಂದು ಕ್ರಿಯಾ ಸಮಿತಿ ತಿಳಿಸಿದೆ. ಜನಪರ ಹೋರಾಟ ಗಳಿಂದ ದೂರ ಸರಿದಿದ್ದ ಬಿಜೆಪಿ ಈಗ ನಡೆಸುವ ಹಕ್ಕು ಮಂಡನೆ ಲೋಪವನ್ನು ಮರೆಮಾ ಚಲಿರುವ ಪ್ರಯತ್ನವಾಗಿದೆ ಯೆಂದು ಕ್ರಿಯಾ ಸಮಿತಿ ದೂರಿದೆ. ಕ್ರಿಯಾ ಸಮಿತಿ ಪದಾಧಿಕಾರಿಗಳಾದ ಅಶ್ರಫ್ ಕಾರ್ಳೆ, ಎ.ಕೆ. ಆರಿಫ್, ಸಿ.ಎ ಸುಬೈರ್, ಅಸೀಸ್ ಕಳತ್ತೂರು, ಪೃಥ್ವೀರಾಜ್, ಲಕ್ಷ್ಮಣ ಪ್ರಭು, ವಿ.ಪಿ. ಅಬ್ದುಲ್ ಖಾದರ್ ಹಾಜಿ ಎಂಬಿವರು ಮೆರವಣಿಗೆಗೆ ನೇತೃತ್ವ ನೀಡಿದರು. ಕುಂಬಳೆಯಲ್ಲಿ ಮೆರವಣಿಗೆ ಬಳಿಕ ಕ್ರಿಯಾ ಸಮಿತಿ ಕಾರ್ಯಕರ್ತರು ವಾಹನದಲ್ಲಿ ಟೋಲ್ ಬೂತ್‌ಗೆ ತಲುಪಿ ರೀತ್ ಇರಿಸಿದರು.

ಆರಿಕ್ಕಾಡಿ ಟೋಲ್ ಬೂತ್‌ನಲ್ಲಿ ವಾಹನಗಳಿಂದ ಟೋಲ್ ಸಂಗ್ರಹ ನಿಲುಗಡೆಗೊಳಿಸಿರುವುದು ಸಾರ್ವ ಜನಿಕರಿಗೆ ಹರ್ಷ ತಂದಿದೆ. ನಿರಂತರವಾಗಿ ಈ ರಸ್ತೆಯಲ್ಲಿ ಸಂಚರಿಸುವ ಬಸ್ ಸಹಿತ ವಾಹನಗಳು ಟೋಲ್ ನೀಡಬೇಕಾಗಿ ಬರುತ್ತಿದ್ದುದರಿಂದ ಭಾರೀ ಆರ್ಥಿಕ ಸಮಸ್ಯೆಯನ್ನು ಕೂಡಾ ಎದುರಿಸಬೇಕಾದ ಸ್ಥಿತಿ ಉಂಟಾಗಿತ್ತು. ಇದೀಗ ಟೋಲ್ ಪ್ಲಾಜಾ ರದ್ದುಗೊಳಿಸಲು ಕೇಂದ್ರ ಸರಕಾರ ಕೈಗೊಂಡ ನಿರ್ಧಾರಕ್ಕೆ ಸಾರ್ವಜನಿಕರಿಗೆ ಮೆಚ್ಚುಗೆ ವ್ಯಕ್ತವಾಗಿದೆ.

You cannot copy contents of this page