ಕಾಡಿನಲ್ಲಿ ಬೇಟೆ: ಮೂವರ ಸೆರೆ; ಕಾಡುಹಂದಿ, ಬಂದೂಕು, ಗುಂಡು, ವ್ಯಾನ್ ವಶ

ಕಾಸರಗೋಡು: ಸರಕಾರಿ ರಕ್ಷಿತಾ ರಣ್ಯಕ್ಕೆ ನುಗ್ಗಿ ವನ್ಯ ಜೀವಿಗಳನ್ನು ಬೇಟೆಯಾಡುತ್ತಿದ್ದ ಮೂವರನ್ನು ಅರಣ್ಯ ಇಲಾಖೆಯ ತಂಡ ಬಂಧಿಸಿದೆ. ಇದಕ್ಕೆ ಸಂಬಂಧಿಸಿ ಬಳಾಲ್ ಕೊನ್ನಕ್ಕಾಡ್ ಚೆರುಂಬಕ್ಕೋಡ್ ಚಾಪೆಯಿಲ್ ಹೌಸ್‌ನ ಆರ್. ರಾಮಕೃಷ್ಣನ್ (49), ಮೈಕಯಂ ಕಳತ್ತಿಲ್ ಪರಂಬಿಲ್ ಹೌಸ್‌ನ ಕೆ.ಕೆ. ರತೀಶ್ (42) ಮತ್ತು  ಮಾಲೋತ್ತ್ ಪಳಯಂಕಾಲ್‌ನ  ಆರ್ ರಾಜೇಶ್ ಯಾನೆ ಮಧು (42) ಎಂಬವರನ್ನು   ಬಂಧಿಸಲಾಗಿದೆ. ಬಳಾಲ್ ಪಂಚಾಯ ತ್‌ನ ರಕ್ಷಿತಾರಣ್ಯಕ್ಕೆ ಸೇರಿದ ಪ್ರದೇಶವಾದ ಮಂಜುಚ್ಚಾಲ್  ಎಂಬಲ್ಲಿಂದ ಈ ಮೂವರನ್ನು ಬಂಧಿಸಲಾಗಿದೆ. ಬಂಧಿತರ ಕೈವಶವಿದ್ದ ಬಂದೂಕು, ಗುಂಡುಗಳು  ಮತ್ತು ಕೊಂದ ಕಾಡುಹಂದಿಯ ಕಳೇಬರವನ್ನು ಅರಣ್ಯ ಇಲಾಖೆಯ ತಂಡ ಪತ್ತೆಹಚ್ಚಿ ಕೇಸು ದಾಖಲಿಸಿಕೊಂಡಿದೆ. ಅರಣ್ಯ ಇಲಾಖೆಯ ಹೊಸದುರ್ಗ ರೇಂಜ್ ಫಾರೆಸ್ಟ್ ಅಧಿಕಾರಿ ಕೆ. ರಾಹುಲ್‌ರಿಗೆ ಲಭಿಸಿದ ಗುಪ್ತ ಮಾಹಿತಿ ಯಂತೆ ಸೆಕ್ಷನ್ ಫಾರೆಸ್ಟ್ ಆಫೀಸರ್ ಒ.ಸುರೇಂದ್ರನ್‌ರ ನಿರ್ದೇಶಪ್ರಕಾರ ಭೀಮನಡಿ ಸೆಕ್ಷನ್ ಬೀಟ್ ಫಾರೆಸ್ಟ್ ಆಫೀಸರ್‌ಗಳಾದ ಪಿ. ಶ್ರೀಧರನ್, ನಿತಿನ್ ಚಂದ್ರನ್, ಎಂ.ಎನ್. ನಂದಕುಮಾರ್, ಜಿಷ್ಣು ಕಂಞಿಕೃಷ್ಣನ್, ಫಾರೆಸ್ಟ್ ಬೀಟ್ ಅಸಿಸ್ಟೆಂಟ್ಸ್ ಎನ್.ಕೆ. ಸಂತೋಷ್ ಮತ್ತು ಪ್ರದೀಪ್ ಕುಮಾರ್ ಎಂಬಿವರನ್ನೊಳ ಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ.  ಬಂಧಿತರು ಚಲಾಯಿಸುತ್ತಿದ್ದ ಪಿಕಪ್ ವಾಹನವನ್ನು ಅರಣ್ಯಪಾಲಕರು ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಧಿತರಿಂದ ವಶಪಡಿಸಲಾದ ಬಂದೂಕು ಮತ್ತು ಗುಂಡುಗಳನ್ನು ಅರಣ್ಯಪಾಲಕರು ನಂತರ ಪೊಲೀಸರಿಗೆ  ಹಸ್ತಾಂತರಿಸಿದ್ದು ಅದರಂತೆ ಪೊಲೀಸರೂ ಬೇರೊಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತರನ್ನು ನಂತರ ಹೊಸದುರ್ಗ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹಾಜರುಪಡಿಸಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

ಬಂಧಿತರ ಪೈಕಿ ಮಧು ಅಲಿಯಾಸ್ ರಾಜೇಶ್ ಈ ಹಿಂದೆ   ಜಿಂಕೆಯನ್ನು ಬೇಟೆಯಾಡಿದ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆಂದು ಅರಣ್ಯಪಾಲಕರು ತಿಳಿಸಿದ್ದಾರೆ.

RELATED NEWS

You cannot copy contents of this page