ಯುವಕನನ್ನು ತಡೆದು ಕಲ್ಲಿನಿಂದ ಹೊಡೆದು ಗಂಭೀರ ಗಾಯ: 3 ಮಂದಿ ವಿರುದ್ಧ ಕೇಸು

ಮಂಜೇಶ್ವರ: ಯುವಕನನ್ನು ತಡೆದು ಕೈಯಿಂದ, ಕಲ್ಲಿನಿಂದ ಹಲ್ಲೆಗೈದು ಗಂಭೀರ ಗಾಯಗೊಳಿಸಿದ ಪ್ರಕರಣಕ್ಕೆ ಸಂಬAಧಿಸಿ ಮೂರು ಮಂದಿ ವಿರುದ್ದ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಐಲ ಕಡಪುö್ಪರ ಶಿವಾಜಿನಗರ ಬಳಿಯ ಕುದುಪುಳು ನಿವಾಸಿಯಾದ ಬಿಜೆಪಿ ಹನೀಫ್ ಎಂದೇ ಗುರುತಿಸಿಕೊಂಡಿರುವ ಮೊಹಮ್ಮದ್ ಹನೀಫ್(28) ಎಂಬವರು ತಲೆಗೆ ಗಂಭೀರ ಗಾಯಗೊಂಡು ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ದೂರಿನಂತೆ ಉಪ್ಪಳ ನಿವಾಸಿಗಳಾದ ಕೌಸರ್, ಅಂಬು ಹಾಗೂ ಅಪರಿಚಿತ ಇನ್ನೋರ್ವ ವ್ಯಕ್ತಿಯ ವಿರುದ್ದ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಭಾನುವಾರ ಮುಂಜಾನೆ 12.30ರ ವೇಳೆ ನಯಬಜಾರ್‌ನಲ್ಲಿ ಹಲ್ಲೆಗೈಯ್ಯಲಾಗಿದೆ. ಸ್ಕೂಟರ್‌ನಲ್ಲಿ ಸಂಚರಿಸುತ್ತಿರುವ ವೇಳೆ ನಯಬಜಾರ್‌ನಲ್ಲಿ ಮೂರು ಮಂದಿ ತಡೆದು ಕೈಯಿಂದ ಮುಖಕ್ಕೆ ಮತ್ತು ಕಲ್ಲಿನಿಂದ ಮುಖಕ್ಕೆ, ತಲೆಗೆ ಹೊಡೆದು ಗಾಯಗೊಳಿಸಿರುವುದಾಗಿ ಹನೀಫ್ ದೂರಿದ್ದಾರೆ. ಹನೀಫ್‌ನ ಮನೆಯ ಬಳಿಯ ಸಮುದ್ರದಿಂದ ಮರಳು ಸಾಗಿಸುತ್ತಿರುವುದನ್ನು ತಡೆದ ವಿರೋಧ ಘಟನೆಗೆ ಕಾರಣವೆಂದು ದೂರಿದ್ದಾರೆ.

You cannot copy contents of this page