ಪಿಎಸ್‌ಸಿ ಜಿಲ್ಲಾ ಕಚೇರಿಗೆ ಬೀಗ ಜಡಿಯಲು ಕೆಎಸ್‌ಯು ಯತ್ನ: ತಡೆದ ಪೊಲೀಸರು; 11 ಮಂದಿ ವಿರುದ್ಧ ಕೇಸು

ಕಾಸರಗೋಡು: ಪಿಎಸ್ ಸಿಯನ್ನು ರಾಜ್ಯ ಸರಕಾರ ಕೇವಲ ಒಂದು ನೋಟದ ವಸ್ತುವನ್ನಾಗಿಸಿ ಉದ್ಯೋಗಾ ರ್ಥಿಗಳನ್ನು ವಂಚಿಸುತ್ತಿ ದೆಯೆಂದು ಆರೋಪಿಸಿ ಕೆಎಸ್‌ಯು ಕಾರ್ಯ ಕರ್ತರು ನಿನ್ನೆ ಪಿಎಸ್‌ಸಿ ಜಿಲ್ಲಾ ಕಚೇರಿಗೆ  ಬೀಗ ಜಡಿಯುವ ಯತ್ನ ನಡೆಸಿದ್ದು, ಅದನ್ನು ಪೊಲೀಸರು ತಡೆದಿದ್ದಾರೆ. ಕೆಎಸ್‌ಯು ಕಾರ್ಯಕರ್ತರು ಪ್ರತಿಭಟನೆ ಹಾಗೂ ಘೋಷಣೆಗಳೊಂ ದಿಗೆ ಪಿಎಸ್‌ಸಿ ಜಿಲ್ಲಾ ಕಚೇರಿಗೆ ಆಗಮಿಸಿ ಬೀಗ ಜಡಿಯಲೆತ್ನಿಸಿದ್ದಾರೆ. ಕೆಎಸ್‌ಯು ಜಿಲ್ಲಾ ಅಧ್ಯಕ್ಷ ಜವಾದ್ ಪುತ್ತೂರು, ಇತರ ಪದಾಧಿಕಾರಿಗಳಾದ ನುಹ್‌ಮಾನ್ ಪಳ್ಳಂಗೋಡು, ಅನ್ಸಾರಿ ಕೋಟೆಕುನ್ನು, ವಿಷ್ಣು ಇರಿಯಣ್ಣಿ, ವೈಷ್ಣವ್ ಕೋಳಿಚ್ಚಾಲು, ಮುಹಮ್ಮದ್ ಸಜ,  ತ್ವಯೀಜ್, ಸಂದೀಪ್ ಮೊದಲಾದವರು ಚಳವಳಿಗೆ ನೇತೃತ್ವ ನೀಡಿದರು. ಇವರನ್ನು ಬಳಿಕ ಪೊಲೀಸರು ವಶಕ್ಕೆ ತೆಗೆದುಕೊಂಡರು.

ಇದಕ್ಕೆ ಸಂಬಂಧಿಸಿ ಕೆಎಸ್‌ಯು ಕಾರ್ಯಕರ್ತರಾದ ಸಿ.ಎಂ. ಮುಹಮ್ಮದ್ ಜವಾದ್, ಕೆ.ಎ. ಅನ್ಸಾರಿ ಸೇರಿದಂತೆ ೧೧ ಮಂದಿ ವಿರುದ್ಧ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

You cannot copy contents of this page